ಮಾ.21ರಂದು ಸರ್ವ ಸದಸ್ಯರ ಸಭೆ: ಮಾ.28ರಂದು ಚುನಾವಣೆ

11 Mar 2021 5:36 PM |
449 Report

ದೇವಾಂಗ ಮಂಡಲಿಯ ಸರ್ವ ಸದಸ್ಯರ ಸಭೆ ಮಾ.21ರಂದು ಬೆಳಿಗ್ಗೆ 9.30ಕ್ಕೆ ನಗರದ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ಮಂಡಲಿಯ ಪ್ರಭಾರಿ ಅಧ್ಯಕ್ಷರಾದ ಕೆ.ಜಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮಂಡಲಿಯ ಗೌ.ಕಾರ್ಯದರ್ಶಿ ಎ.ಎಸ್.ಕೇಶವ ತಿಳಿಸಿದ್ದಾರೆ.

ಮಾ.28ರಂದು  ಒಟ್ಟು 20 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ:

ಅಧ್ಯಕ್ಷರು-1 ಸ್ಥಾನ

ಉಪಾಧ್ಯಕ್ಷರು-2 ಸ್ಥಾನಗಳು

ಗೌರವ ಕಾರ್ಯದರ್ಶಿ-1 ಸ್ಥಾನ

ಸಹ ಕಾರ್ಯದರ್ಶಿ-1 ಸ್ಥಾನ

ಖಜಾಂಚಿ-1 ಸ್ಥಾನ

ನಿರ್ದೇಶಕರು-14 ಸ್ಥಾನಗಳು

ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 19-3-2021

ನಾಮಪತ್ರಗಳ ಪರಿಶೀಲನೆ ದಿನಾಂಕ:: 20-3-2021

ನಾಮಪತ್ರಗಳನ್ನು ವಾಪಾಸು ಪಡೆಯಲು ಕೊನೆಯ ದಿನಾಂಕ: 21-3-2021

ಚುನಾವಣಾ ದಿನಾಂಕ: 28-3-2021 ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ

ಸ್ಥಳ: ಅರಳು ಮಲ್ಲಿಗೆ ಬಾಗಿಲು ಪ್ರೌಢಶಾಲಾ ಆವರಣ, ತೇರಿನ ಬೀದಿ, ದೊಡ್ಡಬಳ್ಳಾಪುರ

ಮತಗಳ ಎಣಿಕೆ: 28-3-2021 ಸಂಜೆ 4.30ರಿಂದ ಎಣಿಕೆ ಮುಕ್ತಾಯವಾಗುವವರೆಗೆ

 

 

Edited By

Ramesh

Reported By

Ramesh

Comments