ದೊಡ್ಡಬಳ್ಳಾಪುರ ದೇವಾಂಗ ಮಂಡಲಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ತಯಾರಿ

11 Mar 2021 5:17 PM |
1227 Report

ದೊಡ್ಡಬಳ್ಳಾಪುರ : ಮಾ.28ರಂದು ನಡೆಯಲಿರುವ ನಗರದ ಪ್ರತಿಷ್ಟಿತ ದೇವಾಂಗ ಮಂಡಲಿ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿದ್ದು, ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ತಯಾರಿ ನಡೆಸುತ್ತಿದ್ದಾರೆ. ಮಾ.11ರ ಮಹಾ ಶಿವರಾತ್ರಿಯಂದು ಎಂ.ಜಿ.ಶ್ರೀನಿವಾಸ್ ನೇತೃತ್ವದ ತಂಡ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಆರಂಭಿಸಿದರು.

ತಂಡದಲ್ಲಿ ಎಂ.ಜಿ.ಶ್ರೀನಿವಾಸ್‌, ಪಿ.ಗೋಪಾಲ್‌, ಕೆ.ಜಿ.ಗೋಪಾಲ್‌, ಆರೂಡಿ ರಮೇಶ್‌, ಯೋಗ ನಟರಾಜ್‌, ಶ್ರೀದೇವಿ, ನಿರ್ಮಲ, ಬಿ.ಎಸ್‌.ವೇಣು, ಎಂ.ಜಿ.ಕುಮಾರ್‌, ಎಂ.ಪಿ.ಸಿ.ರೇಖಾ ವೆಂಕಟೇಶ್‌, ಸುಧಾ.ಎಸ್‌, ಎ.ಎಸ್‌.ಗೋಪಿ, ಕಲ್ಲುಬಾವಿ ನರೇಂದ್ರ, ನಾಮಗೊಂಡ್ಲು ಚಂದ್ರು, ಸಂಕಣ್ಣನವರ ನಾಗರಾಜ್‌, ಕೆಂಕರೆ ದಯಾನಂದ್‌, ಮಹೇಶ.ಎಲ್‌, ತಿರುಮಲ ಮಂಜು, ಬುರುಕುಂಟೆ ಚಂದ್ರು, ಎಸ್‌.ವೆಂಕಟೇಶ್‌ ಅವರು ಸಂಬಾವ್ಯ ಅಭ್ಯರ್ಥಿಗಳಾಗಿದ್ದಾರೆ.

Edited By

Ramesh

Reported By

Ramesh

Comments