ತುಮಕೂರಿನಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ದೇವೇಗೌಡರನ್ನು ಗೆಲ್ಲಿಸಬೇಕು- ಉಪಮುಖ್ಯಮಂತ್ರಿ ಡಾ. ಪರಮೇಶ್ವರ್
ಕೊರಟಗೆರೆ; ಬಿಜೆಪಿದು ಒಡೆದು ಆಳುವ ಸಿದ್ಧಾಂತ. ಸಂವಿಧಾನವನ್ನೇ ಬದಲಿಸುವ, ಸುಟ್ಟುಹಾಕುವ ಮಾತನಾಡಿದ ಇವರನ್ನು ಮತ್ತೆ ತರಬೇಕಾ? ಮನುಸಂಸ್ಕೃತಿ ಮತ್ತೊಮ್ಮೆ ತರುವ ಸಿದ್ಧಾಂತ ಈ ಬಿಜೆಪಿಯದ್ದು. ಅದಕ್ಕೆ ನಾವಿಬ್ಬರು ಒಂದಾಗಿ ಪಣತೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು ಕೊರಟಗೆರೆ ಪಟ್ಟಣದಲ್ಲಿ ನಡೆದ ಜೆಡಿಎಸ್-ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿ ಮಾತನಾಡಿದರು
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ವೇಳೆ ಕಾಂಗ್ರೆಸ್ನವರೇ ಸಿಎಂ ಆಗಲಿ ಎಂದು ಬಿಟ್ಟುಕೊಟ್ಟ ದೇವೇಗೌಡರ ಗುಣ ದೊಡ್ಡದು. ಆದರೆ ನಾವೆಲ್ಲ ಒಮ್ಮತದಿಂದ ಒಪ್ಪಿ ಅನುಭವಿ ಯುವಕ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಹೇಳಿ ನಾವೆಲ್ಲ ಸೇರಿ ಅವರನ್ನು ಸಿ.ಎಂ ಮಾಡಿದ್ದೇವೆ ಎಂದು ಪರಂ ಹೇಳಿದರು.
ನಾನು ಹಾಗೂ ಸುಧಾಕರ್ ಲಾಲ್ ಇಬ್ಬರು ತುಮಕೂರಿನಲ್ಲಿ ವಿರುದ್ಧವಾಗಿ ಚುನಾವಣೆ ಎದುರಿಸಿದ್ದೆವು. ಈಗ ಒಂದಾಗಿ ಒಂದೇ ವೇದಿಕೆಯಲ್ಲಿದ್ದೇವೆ. ಯಾಕೆಂದರೆ ನಮ್ಮ ಧ್ಯೇಯ ಏನಿದ್ದೆರು ದೇವೇಗೌಡರನ್ನು ಗೆಲ್ಲಿಸುವುದು ಅದಕ್ಕಾಗಿಯೇ ನಾವು ಜೊಡೆತ್ತಿನ ರೀತಿ ಹೋರಾಡುತ್ತೇವೆ ಎಂದರು.
ಈ ದೇಶದಲ್ಲಿ ಪ್ರಸ್ತುತ ಬರಗಾಲ ಬೀಕರವಾಗಿದೆ. ರೈತ ಬೆಳೆಗಾಗಿ ಸಾಲಮಾಡಿದ್ದಾನೆ. ಅವರ ಸಾಲಮನ್ನಾ ಮಾಡಲು ನಮ್ಮ ಸರಕಾರ ಮುಂದಾಗಿ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಮಾಡಿ ಎಂದು ಮನವಿ ಮಾಡಿದೆವು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ರೈತರಿಗೆ ಏನು ಮಾಡಿದ್ದೀರಾ? ಪ್ರಧಾನ ಸೇವ ಎಂದು ಹೇಳಿಕೊಳ್ಳುವ ನೈತಿಕತೆ ಮೋದಿಗೆ ಎಲ್ಲಿದೆ.
ತುಮಕೂರಿನಲ್ಲಿ ಅತಿಹೆಚ್ಚು ಮತಗಳನ್ನು ಕೊಟ್ಟು ದೇವೇಗೌಡರನ್ನು ಗೆಲ್ಲಿಸಬೇಕು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರು ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಚುಬಾವಣೆ ಎದುರಿಸಿದ್ದಾರೆ. ಅವರ ಸಾಧನೆ ಏನಾದರೂ ಇದೆ ಎಂದು ಕುಟುಕಿದರು.
ತಮ್ಮ ಹೆಸರಲ್ಲಿ ಮತ ಹಾಕಿ ಎಂದು ಕೇಳಲು ನೈತಿಕತೆ ಇಲ್ಲದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜೊತೆಗೆ ಅವರ ಸಮಯದಲ್ಲಿ ಯಾವ ಗಲಭೆ, ಜಗಳವೂಆಗಿರಲಿಲ್ಲ. ಅಂಥವರು ನಮಗೆ ಬೇಕು. ಅವರ ಗೆಲುವಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು
ಕಾಂಗ್ರೇಸ್ ಗೆದ್ದಿರುವ ಒಂದು ಕ್ಷೇತ್ರವನ್ನೂ ನಾನು ಕೇಳಿರಲಿಲ್ಲ ಸೋತಿರುವ 7 ಕ್ಷೇತ್ರಗಳನ್ನು ನಮಗೆ ನೀಡಿ ಎಂದು ಕೇಳಿದ್ದೆ ಸಿದ್ದರಾಮಯ್ಯ ಸಿದ್ದರಾಮಯ್ಯ ಮತ್ತು ಪರಂ ಆಶಯದಂತೆ ನಾನು ತುಮಕೂರಿಗೆ ಬಂದು ಎಂದು ಹೆಚ್.ಡಿ ದೇವೇಗೌಡ ಹೇಳಿದರು.
ನೀರಾವರಿ ಹೋರಾಟಕ್ಕೆ ನಾನು ಎಂದೆಂದೂ ಮುದೆಯೇ ಕಾವೇರಿ ಮತ್ತು ಕೃಷ್ಣ ನೀರಿನ ವಿಚಾರದಲ್ಲಿ ಎರಡು ಬಾರಿ ಹೆಗ್ಗಡೆ ಕಾಲದಲ್ಲಿ ರಾಜಿನಾಮೆ ನೀಡಿದ್ದೇನೆ..ನನ್ನ ಸಾಧನೆಯ ಬಗ್ಗೆ ನಾನು ಚರ್ಷಿಸುವ ಅವಶ್ಯಕತೆಯಿಲ್ಲ. ಮೋದಿಯ ವಿರುದ್ಧ ನಿಲ್ಲುವವರು ದೇಶದಲ್ಲಿ ಯಾರೂ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಮೋದಿಯೇನು ಹುಲಿಯೇ ಅಥವಾ ಸಿಂಹವೇ... ನಾನು ಪ್ರಧಾನಿಯಾಗಿದ್ದವನೇ 58 ವರ್ಷ ರಾಜಕೀಯ ಅನುಭವವಿದೆ ನಾನು ಅವರ ಮುಂದೆ ನಿಲ್ಲುತ್ತೇನ ಎಂದು ಗುಡುಗಿದರು. ಕಾಯಿಸಿದ್ದಕ್ಕೆ ಕ್ಷಮಿಸಿ:-
ಬೆಳಿಗ್ಗೆ 11.30ಕ್ಕೆ ನಿಗಧಿಯಾಗಿದ್ದ ಕಾರ್ಯಕ್ರಮದಕ್ಕೆ ದೇವೇಗೌಡರು ಮದ್ಯಾಹ್ನ 2 ಕ್ಕೆ ಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಕಾಯಿಸಿದಕ್ಕೆ ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿದರು.
ಪರಂ ಗೆ ರಾಜಕೀಯ ಶಕ್ತಿ ನೀಡುತ್ತೇನೆ:- ನನ್ನನ್ನು ತುಮಕೂರು ಕ್ಷೇತ್ರಕ್ಕೆ ಕರೆದಂದು ನನ್ನ ಚುನಾಣಾ ಪ್ರಚಾರವನ್ನು ಹಗಲಿರುಳು ಮಾಡಿರುವ ಉಪಮುಖ್ಯಮಂತ್ರಿ ಪರಮೇಶ್ವರ್ಗೆ ನಾನು ರಾಕೀಯ ಶಕ್ತಿಯನ್ನು ನೀಡಿಯೇ ಹೋಗೋದು ಇದು ನನ್ನ ಪ್ರತಿಜ್ಞೆ ಎಂದರು. ಮಾಜಿ ಶಾಸಕ ಸುಧಾಕರ್ ಲಾಲ್ ಗೆ ಎಂಎಲ್ಸಿ ಭರವಸೆ:- ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಂ ವಿರುದ್ದ ಸೋತಿರುವ ಸುಧಾಕರ್ ಲಾಲ್ಗೂ ರಾಜಕೀಯವಾಗಿ ಸ್ಥಾನ ಕಲ್ಪಿಸುವ ಹಿನ್ನೆಲೆಯಲ್ಲಿ ಎಂಎಲ್ಸಿ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆ ಸೋಮಶೇಖರ್, ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಕಾಂಗ್ರೇಸ್ ವಕ್ತಾರ ಮುರುಳೀಧರ್ ಹಾಲಪ್ಪ, ಜಿ.ಪಂ ಸದಸ್ಯ ಶಿವರಾಮಯ್ಯ, ಪ್ರೇಮಾ, ಅಕ್ಕಮಹಾದೇವಿ, ತಾ.ಪಂ ಸದಸ್ಯ ಈರಣ್ಣ, ಪ.ಪಂ ಸದಸ್ಯ ನರಸಿಂಹಪ್ಪ, ಕೆ.ಆರ್ ಓಬಳರಾಜು, ಮುಖಂಡರಾದ ಬಿಕ್ಕೇಗುಟ್ಟೆ ವೆಂಕಟೇಶ್, ಕೆ.ಎಲ್ ಆನಂದ್, ರಾಘವೇಂದ್ರ, ಚಿಕ್ಕರಂಗಯ್ಯ ಸೇರಿದಂತೆ ಇತರರು ಇದ್ದರ
|
Comments