ಯಾದವ ಸಮುದಾಯ ದೇವೇಗೌಡರ ಪರವಾಗಿದೆ: ಪ್ರೇಮಾ ಮಹಾಲಿಂಗಪ್ಪ
ಕೊರಟಗೆರೆ ಏ.14:- ಪ್ರತಿಯೊಂದು ಹಿಂದುಳಿದ ವರ್ಗಗಳಿಗೂ ಮಾನ್ಯತೆ ನೀಡಿದ ಹೆಗ್ಗಳಿಗೆ ಜೆಡಿಎಸ್ ಪಕ್ಷಕ್ಕೆ ಸೇರುತ್ತದೆ ಎಂದು ಹುಲೀಕುಂಟೆ ಜಿ.ಪಂ ಸದಸ್ಯ ಪ್ರೇಮಾ ಮಹಾಲಿಂಗಪ್ಪ ತಿಳಿಸಿದರು. ಕಸಬಾ ಹೋಬಳಿ ವ್ಯಾಪ್ತಿಯ ವಡ್ಡಗೆರೆ , ಹಂಚಿಹಳ್ಳಿ., ಹುಲೀಕುಂಟೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮೈತ್ರಿ ಅಭ್ಯಥರ್ಿ ಹೆಚ್.ಡಿ ದೇವೇಗೌಡರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಯಾದವ ಸಮುದಾಯದ ಎ. ಕೃಷ್ಣಪ್ಪನವರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ನಂತರ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು ಕೃಷ್ಣಪ್ಪನವರು ಹೃದಯಾಗಾದಿಂದ ಮೃತಪಟ್ಟರೆ ಇದನ್ನೇ ಪ್ರಚಾರಕ್ಕೆ ಅಹಾರ ಮಾಡಿಕೊಂಡಿರುವ ಬಿಜೆಪಿಯವರು ಯಾದವ ಸಮುದಾಯಕ್ಕೆ ಕೃಷ್ಣಪ್ಪನವರ ಸಾವಿಗೆ ದೇವೇಗೌಡರೇ ಕಾರಣ ಎನ್ನುವ ಅಸಬದ್ಧ ಹೇಳಿಕೆಗಳನ್ನು ಹೇಳುತ್ತಿದ್ದು... ಇವರ ಮಾತಿಗೆ ಯಾದವ ಸಮುದಾಯ ಕಿವಿಕೊಡುವುದಿಲ್ಲ ಎಂದು ಕುಟುಕಿದರು.
ತಾಲೂಕಿನಲ್ಲಿರುವ ಯಾದವ ಸಮುದಾಯ ಮೈತ್ರಿ ಅಭ್ಯರ್ಥಿ ದೇವೇಗೌಡರ ಪರವಾಗಿಯೇ ಇದ್ದು ನಮ್ಮ ವಿರೋಧಿಗಳು ನಮ್ಮ ಸಮುದಾಯವರ ದಾರಿ ತಪ್ಪಿಸಲು ಸತ್ಯಕ್ಕೆ ದೂರವಾದಂತಹ ನಂಬಲಸಾಧ್ಯವಾದಂತಹ ಹೇಳಿಕೆಗಳನ್ನು ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾ ಜೆಡಿಎಸ್ ಕಾರ್ಯದರ್ಶಿಯೂ ಆದ ತಾಲೂಕು ಯಾದವ ಸಂಘದ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಪಗಪ್ಪ ಮಾತನಾಡಿ ದೇವೇಗೌಡರು ಯಾದವ ಸಮುದಾಯವಲ್ಲದೇ ಎಲ್ಲಾ ಹಿಂದುಳಿದ, ಅಲ್ಪಸಂಖ್ಯಾತರ, ದೀನ, ದಲಿತರ ಪರವಾಗಿಯೇ ಇದ್ದು ಸರ್ವರಿಗೂ ಅಧಿಕಾರನ್ನು ನೀಡಿದ್ದು ನಾವು ಒರ್ವ ಮಾಜಿ ಪ್ರಧಾನಿಯವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಅವರ ವಿರುದ್ಧ ಸತ್ಯಕ್ಕೆ ದೂರವಾದಂತಹ ನಿಂಧನೆ ಅಥವಾ ಆರೋಪಗಳನ್ನು ಮಾಡಬಾರದು ಅದೇ ರೀತಿ ಸಮುದಾಯಕ್ಕೆ ತಪ್ಪು ಸಂದೇಶಗಳನ್ನು ನೀಡಿ ದಾರಿ ತಪ್ಪಿಸುವ ಕೆಲಸವನ್ನು ಮಾಡಬೇಡಿ ಎಂದು ಮನವಿ ಮಾಡಿದರು.
ವಡ್ಡಗೆರೆ ಗ್ರಾ.ಪಂ ನ ಚೀಲಗಾನಹಳ್ಳಿ, ವಡ್ಡಗೆರೆ, ಬುರುಗನಹಳ್ಳಿ, ಓಬಳದೇವರಹಳ್ಳಿ, ಮಲಪನಹಳ್ಳಿ, ಹಂಚಿಹಳ್ಳಿ ಗ್ರಾಪಂನ ನಾಗೇನಹಳ್ಳಿ, ಗೊಲ್ಲರಹಳಟ್ಟಿ, ಸೇರಿದಂತೆ ಹುಲೀಕುಂಟೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಭಕ್ತರಹಳ್ಳಿ ಸಿದ್ದಲಿಂಗಪ್ಪ, ಗ್ರಾ.ಪಂ ಸದಸ್ಯ ಬಾಲೇನಹಳ್ಳಿ ನಾಗಭೂಷಣ್, ಮಾಜಿ ತಾ.ಪಂ ಸದಸ್ಯ ತಿಮ್ಮಣ್ಣ, ಮುಖಂಡರಾದ ರಂಗಣ್ಣ, ಸಿದ್ದಪ್ಪ, ಸೀನಪ್ಪಗೌಡ್ರು, ಪುಟ್ಟೀರಪ್ಪ ಸೇರಿದಂತೆ ಇತರರು ಇದ್ದರು. ( ಚಿತ್ರಗಳು ಇವೆ)
Comments