ಎಚ್ ಡಿ ದೇವೆಗೌಡರ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ..!!

11 Apr 2019 9:53 AM |
5977 Report

ಈಗಾಗಲೇ ರಾಜಕೀಯದಲ್ಲಿ ಕುಟುಂಬ ರಾಜಕೀಯ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ.. ಅದರಲ್ಲೂ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದಿಂದಲೂ ಕೂಡ ಈ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ.. ಇದೀಗ ಅದಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ಘಟನೆ ನಡೆದಿದೆ. ಈಗಾಗಲೇ ದೇವೆಗೌಡರ ಕುಟುಂಬದಿಂದ ಮಕ್ಕಳು,ಮೊಮ್ಮಕ್ಕಳು,ಸೊಸೆಯಂದಿರು ಎಲ್ಲರೂ ರಾಜಕೀಯ ಅಖಾಡಕ್ಕೆ ದುಮುಕಿದ್ದು ಆಗಿದೆ.. ಆದರೆ ಇದೀಗ ಎಚ್ ಡಿ ದೇವೆಗೌಡರ ಕಿರಿಯ ಪುತ್ರ ಎಚ್ ಡಿ ರಮೇಶ್ ಕೂಡ ಅಖಾಡಕ್ಕೆ ಇಳಿದಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಅವರ ಕಿರಿಯ ಮಗ ಎಚ್.ಡಿ.ರಮೇಶ್ ಪ್ರಚಾರ ನಡೆಸಿದರು. ದಾಬಸ್ ಪೇಟೆ ಮಾರ್ಗವಾಗಿ ತುಮಕೂರು ಜೆಡಿಎಸ್ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ದೇವೇಗೌಡರ ಕಿರಿಯ ಪುತ್ರ ರಮೇಶ್ ದಾಬಸ್‌ಪೇಟೆ ಬಳಿಯ ಎಡೇಹಳ್ಳಿಯ ಜೆಡಿಎಸ್ ಮುಖಂಡರು ಹಾಗೂ ಹೋಬಳಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ತೀರ್ಥಪ್ರಸಾದ್ ಮನೆಗೆ ಭೇಟಿ ನೀಡಿದರು. ಅಲ್ಲಿ ಚಹಾ ಕುಡಿದು ಹೋಬಳಿಯ ಮುಖಂಡರ ಜೊತೆ ಚರ್ಚಿಸಿ, ನಮ್ಮ ಜೆಡಿಎಸ್ ಪಕ್ಷವನ್ನು ಕಾರ್ಯಕರ್ತರು ಹಾಗೂ ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸಬೇಕೆಂದು ಕೋರಿದರು. ಒಟ್ಟಾರೆಯಾಗಿ ಕಿರಿಯ ಪುತ್ರ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವುದರಿಂದ ಮುಂದೊಂದು ದಿನ ರಾಜಕೀಯಕ್ಕೆ ಬರುವುದು ನಿಶ್ಚಿತ ಎನ್ನುತ್ತಿದ್ದಾರೆ.

Edited By

hdk fans

Reported By

hdk fans

Comments