ನಿಖಿಲ್ ಕುಮಾರಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಎಂದು ಭವಿಷ್ಯ ನುಡಿದಿದ್ದು ಯಾರ್ ಗೊತ್ತಾ..?
ಲೋಕಸಭಾ ಅಖಾಡಗಳು ದಿನದಿಂದ ದಿನಕ್ಕೆ ರಂಗೇರುತ್ತಿವೆ.. ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ.. ಅದರಲ್ಲೂ ಮಂಡ್ಯ ಅಖಾಡ ಮಾತ್ರ ದಿನದಿಂದ ದಿನಕ್ಕೆ ಸುದ್ದಿಯಾಗಿತ್ತಲೆ ಇದೆ.. ಒಂದು ಕಡೆ ನಿಖಿಲ್ ,ಮತ್ತೊಂದು ಕಡೆ ಸುಮಲತಾ.. ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.. ಎಲ್ಲಾ ಜಿಲ್ಲೆಯ ಲೋಕಸಮರಕ್ಕಿಂತ, ಮಂಡ್ಯ ಜಿಲ್ಲೆಯ ಲೋಕಸಮರ ಕ್ಷಣಕ್ಷಣಕ್ಕೂ ಕೌತುಕದ ವಿಷಯಗಳನ್ನು ಹೊರಹಾಕುತ್ತಿದೆ..ಇದೀಗ ನಿಖಿಲ್ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಪರಿಷತ್ ಸದಸ್ಯ ಅಪ್ಪಾಜಿ ಗೌಡ ಭವಿಷ್ಯ ನುಡಿದಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಅಪ್ಪಾಜಿಗೌಡ ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಅಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕುಮಾರಸ್ವಾಮಿ ಕೂಡ 1996 ರಲ್ಲಿ ಗೆದ್ದು ಲೋಕಸಭೆ ಪ್ರವೇಶ ಮಾಡಿದ್ದರು.. ಅದೇ ರೀತಿ ನಿಖಿಲ್ ರನ್ನು ಕೂಡ ರಾಜ್ಯದ ಅಭಿವೃದ್ಧಿಗೆ ಈ ಬಾರಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಒಟ್ಟಾರೆಯಾಗಿ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಎನ್ನುವುದನ್ನು ಸಾಕಷ್ಟು ರಾಜಕೀಯ ಗಣ್ಯರು ಮಾತನಾಡುತ್ತಿದ್ದಾರೆ.
Comments