ದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುತವನ್ನು ಪಡೆಯಲಿದೆ: ಮಾಜಿ ಸಚಿವ ವಿ. ಸೋಮಣ್ಣ
ಕೊರಟಗೆರೆ ಏ.9:- ದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುತದಿಂದ ಅಧಿಕಾರಕ್ಕೆ ಬರಲಿದ್ದು ಮತ್ತೆ ಮೋದಿ ಪ್ರಧಾನಿಯಾಗುವುದು ನಿಶ್ವಿತ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು. ಮಂಗಳವಾರ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಪರವಾಗಿ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದರು.
ಜಿ.ಎಸ್ ಬಸವರಾಜು ಸ್ಥಳೀಯ ಅಭ್ಯರ್ಥಿ 4 ಭಾರಿ ಸಂಸದರಾಗಿದ್ದಾರೆ... ನಿಮ್ಮಲ್ಲರೊಟ್ಟಿಗೆ ಸದಾ ಇರುತ್ತಾರೆ... ಅವರಿಗೆ ಮತ ಹಾಕಬೇಕು... ಅದೇ ರೀತಿ ನಿಮ್ಮ ಮತ ದೇಶದ ಅಭಿವೃದ್ಧಿಗಾಗಿ ಇರುತ್ತದೆ ಯಾವುದೇ ಸುಳ್ಳು ಆಶ್ವಾಸನೆಗೆ... ಯಾವುದೇ ಆಮಿಷಗಳಿಗೆ ಒಳಗಾಗದೇ ಬಿಜೆಪಿಗೆ ಮತ ಹಾಕಬೇಕು ಈ ದೇಶದ ರಕ್ಷಣೆಗೆ ಮತ್ತು ಭವಿಷ್ಯಕ್ಕೆ ಮೋದಿಯನ್ನು ಬೆಂಬಲಿಸಿ ಎಂದರು.
ಕಾಲು ನಡಿಗೆಯಲ್ಲಿಯೇ ಪಟ್ಟಣದ ಪ್ರಮುಖ ಬೀದಿಗಳಾದ ದೊಡ್ಡಪೇಟೆ, ಕೋಟೆ ಬೀದಿ, ಸಜ್ಜನರ ಬೀದಿ, ಗಣೇಶನ ಬೀದಿ, ರಾಮಾಂಜನೇಯ ಬೀದಿ, ಸುಣ್ಣಕಲ್ಲರ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಪವನ್ ಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ತಿಮ್ಮಜ್ಜ, ವಾಸವಿ ಯುವಜನ ಸಂಘದ ಅಧ್ಯಕ್ಷ ಬದ್ರಿಪ್ರಸಾದ್, ಕಾರ್ಯದರ್ಶಿ ಜಿ. ಲಕ್ಷ್ಮಿಪ್ರಸಾದ್, ಪ.ಪಂ ಸದಸ್ಯ ಪ್ರದೀಪ್, ಮುಖಂಡರಾದ ನಟರಾಜು, ಚಂದ್ರಶೇಖರ್, ನಾಗರಾಜು, ಸೇರಿದಂತೆ ಇತರರು ಇದ್ದರು.
ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭೇಟಿ:-
ಬಿಜೆಪಿ ಮುಖಂಡರೊಟ್ಟಿಗೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಪೀಠಾಧ್ಯಕ್ಷ ಡಾ. ಹನುಮಮಂತನಾಥಸ್ವಾಮೀಜಿಯವರ ಆಶೀರ್ವಾದ ಪಡೆದರು. ಸೋಮಣ್ಣರೊಟ್ಟಿಗೆ ಹಲವು ಬಿಜೆಪಿ ಸ್ಥಳೀಯ ಕಾರ್ಯಕರ್ತರು ಇದ್ದರು. (ಚಿತ್ರಗಳಿವೆ )
Comments