ವಡ್ಡಗೆರೆ ವೀರನಾಮ್ಮ ದೇವಾಲಯಕ್ಕೆ ದೇವೇಗೌಡರ ಭೇಡಿ :
ಕೊರಟಗೆರೆ ಏ. :-; ಭೂಲೋಕಕ್ಕೆ ಸತ್ಯವನ್ನು ತಂದಂತಹ ಸತ್ಯದೇವತೆ ವಡ್ಡಗೆರೆ ವೀರನಾಗಮ್ಮ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ವಡ್ಡಗೆರೆ ವೀರಾನಾಮ್ಮ ದೇವಾಲಯದಲ್ಲಿನ ನಡೆದ ಜಾತ್ರಾಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಜಾತಿ ಭೇದವಿಲ್ಲದೇ ಹಲವು ಸಮುದಾಯವರ ಮನೆ ದೇವರಾಗಿರುವ ವೀರನಾಮ್ಮ ಇದ್ದು ಕಲಿಯುಗದಲ್ಲಿ ಸತ್ಯದೇವತೆಯಾಗಿ ಇಲ್ಲಿ ನೆಲೆಸಿದ್ದಾರೆ ಮುಜರಾಯಿ ಇಲಾಖೆಗೆ ದೇವಾಲಯ ಒಳಪಟ್ಟಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಯ ಅವಶ್ಯಕತೆಯಿದ್ದು ಯಾತ್ರಾತ್ರಿಗಳಿಗೆ ಅನುಕೂಲ ಕೈಗೊಳ್ಳಬೇಕಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ದೇವಾಲಯ ಆಡಳಿತ ಮಂಡಳಿ ಅಭಿನಂಧಿಸಿದರು. ದೇವಾಲಯದ ಅಭಿವೃದ್ಧಿಗೆ ಅನುಧಾನದ ಬಿಡುಗಡೆ ಸಹಕರಿಸಬೇಕು ಎಂದು ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮವಾಗಿ ಸ್ಪಧಿಸಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯೊಂದಿಗೆ ಚಚರ್ಿಸಿ ದೇವಾಲಯಕ್ಕೆ ಅನುಧಾನ ಬಿಡುಗಡೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಭಕ್ತರಿಗೆ ವೀರನಾಮ್ಮ ಟ್ರಸ್ಟ್ ವತಿಯಿಂದ ಪ್ರಸಾದ ವ್ಯವಸ್ಥೆ ಮತ್ತು ದರ್ಶನಕ್ಕೆ ಸರತಿ ಸಾಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಚಿವ ಶ್ರೀನಿವಾಸ್,ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ಜಿ.ಪಂ ಸದಸ್ಯ ಶಿವರಾಮಯ್ಯ, ಕಾಂಗ್ರೆಸ್ ವಕ್ತಾರ ಮುರುಳೀಧರ್ ಹಾಲಪ್ಪ, ವೀರನಾಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್, ರಾಜ್ಯ ಕುಂಚಿಟಿಗರ ಸಂಘದ ರಾಜ್ಯಾಧ್ಯಕ್ಷ ವಿನಯ್ ಪೂಜಾರ್, ಮಾಜಿ ಅಧ್ಯಕ್ಷ ವಿ.ಎನ್ ವೀರಕ್ಯಾತಯ್ಯ, ಜೆಡಿಎಸ್ ಜಿಲ್ಲಾ ಕಾರ್ಯದಶರ್ಿ ಹೆಚ್.ಕೆ ಮಹಾಲಿಂಗಪ್ಪ, ಮುಖಂಡರಾದ ಅಂದಾನಪ್ಪ, ಕೆ.ಹೆಚ್ ದೊಡ್ಡೇಗೌಡ, ಅರ್ಚಕರಾದ ಶಿವಕುಮಾರಸ್ವಾಮಿ ಸೇರಿದಂತೆ ನೂರಾರು ಕಾಂಗ್ರೇಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಇತರರು ಇದ್ದರು(ಚಿತ್ರ ಇದೆ)
8ಕೆಆರ್ಟಿ ಚಿತ್ರ2:- ವಡ್ಡಗೆರೆ ವೀರನಾಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ಅಭಿನಂಧಿಸಲಾಯಿತು, ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀನಿವಾಸ್, ಕಾಂಗ್ರೇಸ್ ವಕ್ತಾರ ಮುರುಳೀಧರ್ ಹಾಲಪ್ಪ ಸೇರಿದಂತೆ ಇತರರು ಇದ್ದರು.
Comments