''ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಮಹಾ ಚಕ್ರವ್ಯೂಹ '' : ಮುಖ್ಯ ಮಂತ್ರಿಯೇ ಬಾಯ್ಬಿಟ್ಟ ರಹಸ್ಯವೇನು..?!!!

05 Apr 2019 2:30 PM |
2240 Report

ಒಂದು ಕಡೆ ಲೋಕ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ  ರಾಜ್ಯ ರಾಜಕೀಯ ಸಾಕಷ್ಟು ತಿರುವುಗಳನ್ನು ಪಡೆಯುತ್ತಿದೆ. ಸ್ಪರ್ಧಿಗಳ ವೈಯಕ್ತಿಕ ತೇಜೋವಧೆಯನ್ನು ಪರಸ್ಪರ ಮಾಡಲಾಗುತ್ತಿದೆ. ಒಟ್ಟಾರೆ ಈ ಬಾರಿ ರಾಜ್ಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ರಾಜಕೀಯ ಮಾತ್ರ ದೇಶಾದ್ಯಂತ ಸುದ್ದಿಯಾಗ್ತಾಯಿರೋದು ಸುಳ್ಳಲ್ಲ. ಇಬ್ಬರು ಘಟಾನುಘಟಿ ಸ್ಪರ್ಧಿಗಳ  ನಡುವೆ ಬಿಗ್ ಫೈಟ್ ಜೋರಾಗಿಯೇ ನಡೆಯುತ್ತಿದೆ. ಮುಖ್ಯಮಂತ್ರಿ ಮಗ ನಿಖಿಲ್ ಗೆ ಎದುರಾಳಿಯಾಗಿ ಅಂಬಿ ಪತ್ನಿ ಎಂಟ್ರಿ ರಾಜ್ಯ ರಾಜಕೀಯ ನಾಯಕರ ನಿದ್ದೆಗೆಡಿಸಿದೆ.

ಜೆಡಿಎಸ್ ನಾಯಕರಲ್ಲಿ ಸ್ವಲ್ಪಅಳುಕು ಉಂಟು ಮಾಡಿರುವ ಸುಮಲತಾ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಜೆಡಿಎಸ್ ಗೆ ಮುಖಭಂಗವಾಗೋದಂತೂ ನಿಜ. ಅದೇನೇ ಇರಲೀ ಎಲೆಕ್ಷನ್ ಮೊದಲೇ ಫಲಿತಾಂಶದ ಸುಳಿವು ಬಿಟ್ಟು ಕೊಡುತ್ತಿರುವ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಕುಮಾರ ಸ್ವಾಮಿ ನನ್ನ ಮಗ ನಿಖಿಲ್ ಕುಮಾರ ಸ್ವಾಮಿಯನ್ನು ಸೋಲಿಸಲು ಮಂಡ್ಯದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ. ನನ್ನೊಂದಿಗಿದ್ದವರೇ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಹೇಳಿಕೆಯಲ್ಲಿ ಏನಿದೆ ರಹಸ್ಯ…?

Image result for kumarswamy angry

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರು ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ. ಅವರ ಬೆಂಬಲಕ್ಕೆ ಎಲ್ಲಾ ಪಕ್ಷಗಳು ಒಗ್ಗೂಡಿ ಚುನಾವಣಾ ತಂತ್ರವನ್ನು ರೂಪಿಸಿವೆ ಎಂದು ಆರೋಪಿಸಿದರು.ಬಿಜೆಪಿ, ಕಾಂಗ್ರೆಸ್, ರೈತ ಸಂಘ ಎಲ್ಲ ಸೇರಿ ಚಕ್ರವ್ಯೂಹ ರೂಪಿಸಿದ್ದು, ಅದನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಮಂಡ್ಯ ಜನತೆ ನೀಡುವ ವಿಶ್ವಾಸವಿದೆ ನನಗೆ ಎಂದರು.  ಕಳೆದ ಮೂರು ತಿಂಗಳಿಂದ ನಾನು ಗಮನಿಸುತ್ತಿದ್ದೇನೆ. ಮಹಾ ವ್ಯೂಹವನ್ನೇ ಎಣೆದಿದ್ದಾರೆ. ಜೆಡಿಎಸ್ ಮಣಿಸಲು ಭಾರೀ ಕಸರತ್ತು ನಡೆಸಲಾಗಿದೆ. ಹೆಸರಿಗಷ್ಟೇ ಸುಮಲತಾ ಪಕ್ಷೇತರ ಅಭ್ಯರ್ಥಿ, ಅವರಿಂದೆ  ಯಾರಿದ್ದಾರೆ ಎಂಬುದು ನನಗೊತ್ತು. ಆದರೆ ಜನ ನನ್ನೊಂದಿರುವ ತನಕ ಅವರಿಗಿಂತ ಮಹಾ ಶಕ್ತಿ ನನಗೆ ಬೇಕಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಮಾಜಿ ಪ್ರಧಾನಿ ಹೆ.ಡಿ ದೇವೇಗೌಡರು ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಲ್ಲೆಡೆ ಜೆಡಿಎಸ್ ಅಭ್ಯರ್ಥಿಗಳನ್ನು ಮಣಿಸಲು ಭಾರೀ ಸಿದ್ಧತೆ ಮಾಡಲಾಗುತ್ತಿದೆ. ಚಕ್ಕಮಂಗಳೂರಿನಲ್ಲೂ  ಇದರ ಹೊರತಾಗಿ ಏನಿಲ್ಲ ಎಂದು ಮುಖ್ಯಮಂತ್ರಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಕುಮಾರ ಸ್ವಾಮಿ ಮಾತ್ರ ನಾವು ಜೆಡಿಎಸ್ ಗೆಲುವಿನ ಭರವಸೆ ಬಿತ್ತಿದ್ದಾರೆ.ಒಟ್ಟಾರೆ ಜೆಡಿಎಸ್ ನಾಯಕರ ಮಾತಿನಿಂದ  ಎಲೆಕ್ಷನ್ ಆಗುವ ಮೊದಲೇ, ಜೆಡಿಎಸ್ ಸೋಲಿನ ಅನುಭವ ಅನುಭವಿಸುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂಬುದು ಕೆಲ ಬಲ್ಲ ಮೂಲಗಳ ಅಭಿಪ್ರಾಯ.

 

Edited By

hdk fans

Reported By

hdk fans

Comments