ಕುಂಚಿಟಿಗರನ್ನು ನಿರ್ಲಕ್ಷಿಸಬೇಡಿ... ನಾವು ಮತದಾರರೇ.... ನಾವು ನಿರ್ಣಾಯಕರೇ...!!
ಕೊರಟಗೆರೆ ಏ. ಇತರೆ ಹಿಂದುಳಿದ ಜನಾಂಗಕ್ಕೆ ನೀಡಿದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕುಂಚಿಟಿಗ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಕುಂಚಿಟಿಗರ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಪೂಜಾರ್ ಒತ್ತಾಯಿಸಿದರು. ಕುಂಚಿಟಿಗ ಸಮುದಾಯದವನ್ನು ಉದ್ದೇಶಿಸಿ ನಡೆದ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಕುರಿತು ಬಿಜೆಪಿ, ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ವರಿಷ್ಠರಿಗೆ ಮನವಿಯನ್ನು ಸಲ್ಲಿಸಿದ್ದು ಮೀಸಲಾತಿ ಬಗ್ಗೆ ಮನವರಿಗೆ ಮಾಡಿದ್ದು ಅವರುಗಳು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕುಂಚಿಟಿಗ ಸಮುದಾಯಕ್ಕೆ ಭರವಸೆ ನೀಡಬೇಕು ಎಂದು ಅವಲತ್ತುಕೊಂಡಿದ್ದೇವೆ ಕಳೆದ ವರ್ಷ ಅಕ್ಟೋಬರ್-2 (ಗಾಂಧಿಯಂತಿಯಂದು) ಗಾಂಧಿ ಪ್ರತಿಮೆ ಎದುರು ಕರ್ನಾಟಕ ರಾಜ್ಯ ಕುಂಚಿಟಿಗ ಸಂಘ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದೊಂದಿಗೆ ಮೌನ ಪ್ರತಿಭಟನೆಯನ್ನು ಮಾಡಿದ್ದೇವೆ ನಮ್ಮ ಪ್ರತಿಭಟನೆಗೆ ಮಣಿದು ರಾಜ್ಯದ ಸಮಿಶ್ರ ಸರ್ಕಾರ ಕೇಂದ್ರದ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸ್ಸು ಮಾಡಿರುತ್ತದೆ… ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯವನ್ನು ಮಾಡಿದ್ದು ಎಲ್ಲರೂ ಸಕಾರಾತ್ಮ ಉತ್ತರ ನೀಡಿದ್ದಾರೆ ಇದು ಕೇವಲ ಭರವಸೆಯಾದಗೆ ಕಾರ್ಯಗತವಾಗಬೇಕು ಎಂದು ತಿಳಿಸಿದರು.
ತುಮಕೂರು,ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಕೇಂದ್ರ, ಲೋಕಸಭಾ ವ್ಯಾಪ್ತಿಯಲ್ಲಿ ಸಮುದಾಯದ ನಿರ್ಣಾಯಕ ಮತದಾರರಿದ್ದು ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ, ಬೌಗೋಳಿಕವಾಗಿ, ಹಿಂದುಳಿದಿರುವ ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರದ ಸಂಪುಟ ಅನುಮೊದನೆ ಮಾಡಿ, ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕ್ರಮ ವಹಿಸಲು ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು ನಮಗೂ ಇದರ ಅವಕಾಶ ಕಲ್ಪಿಸಬೇಕು ಎಂದರು.
Comments