ತೆನೆಹೊತ್ತ ಮಹಿಳೆ ಜೊತೆ ಕೈ ಜಂಟಿ ಪತ್ರಿಕಾಗೋಷ್ಠಿ
ಇಂದು ದೊಡ್ಡಬಳ್ಳಾಪುರ ನಗರದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರುಗಳು ಒತ್ತಾಗಿ ಸಂಸದ ವೀರಪ್ಪಮೊಯಿಲಿ ಬೆಂಬಲಿಸಲು ಜಂಟಿ ಸುದ್ದಿಗೋಷ್ಠಿ ನೆಡೆಸಿದರು, ಮೈತ್ರಿ ಧರ್ಮದ ಅನುಸಾರ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀರಪ್ಪಮೊಯಿಲಿಗೆ ಬೆಂಬಲ ನೀಡುವಂತೆ ರಾಷ್ಟ್ರಿಯ ಅದ್ಯಕ್ಷ ಹೆಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆದೇಶದಂತೆ ನಮ್ಮ ತಾಲೂಕಿನ ಜೆ.ಡಿ.ಎಸ್ ಪಕ್ಷದ ಎಲ್ಲಾ ಮುಖಂಡರುಗಳಲ್ಲಿ ಮನವಿ ಮಾಡಿದ್ದೇನೆ, ನಿಷ್ಠಾವಂತ ಕಾರ್ಯಕರ್ತರ ಸಂಪೂರ್ಣ ಬೆಂಬಲ ಜೆ.ಡಿ.ಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಡಾ. ಎಂ ವೀರಪ್ಪ ಮೊಯ್ಲಿ ರವರಿಗೆ ನೀಡುತ್ತೇವೆ ಎಂದು ಜಿಲ್ಲಾಧ್ಯಕ್ಷ ಮುನೇಗೌಡ ಹೇಳಿದರು. ಕನ್ನಡ ಜಾಗೃತ ಭವನದಲ್ಲಿ ಇಂದು ಕರೆದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಂತರ ಮಾತನಾಡಿದ ಸಂಸದ ವೀರಪ್ಪಮೊಯಿಲಿ ಮೈತ್ರಿಧರ್ಮ ಪಾಲನೆಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಪ್ರಚಾರದಲ್ಲಿ ಭಾಗವಹಿಸಿ ಮೂರನೇ ಬಾರಿಗೆ ಸಂಸದನಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಲು ಸಹಕರಿಸುವಂತೆ ಮನವಿ ಮಾಡಿದರು, ಕಳೆದ ಹತ್ತು ವರ್ಷಗಳಿಂದ ಎತ್ತಿನಹೊಳೆ ಕಾಮಗಾರಿ ನೆಡೆಯುತ್ತಿದೆ, ಈಗ ಅರ್ಧಕ್ಕೆ ಬಂದು ನಿಂತಿದೆ ಅದನ್ನು ಈಬಾರಿ ಮುಕ್ತಾಯ ಮಾಡಲು ನನ್ನನ್ನು ಸಂಸದನನ್ನಾಗಿ ಮತ್ತೆ ಆರಿಸಿ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಯ್ಯ, ಅಪ್ಪಯ್ಯಣ್ಣ, ರಂಗರಾಜು, ಎಂ.ಜಿ.ಶ್ರೀನಿವಾಸ್, ನಗರ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಕೆಂಪರಾಜು, ಕಾರ್ಯಾಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ನಗರ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ಸೇರಿದಂತೆ ಎರಡೂ ಪಕ್ಷಗಳ ಪದಾಧಿಕಾರಿಗಳು ಹಾಜರಿದ್ದರು.
Comments