ಜೆಡಿಎಸ್’ನಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ : ಯಾರೆಲ್ಲಾ ಕ್ಯಾಂಪೇನ್'ಗೆ ಬರ್ತಾರೆ...!!!

02 Apr 2019 3:44 PM |
5107 Report

ಅಂದಹಾಗೇ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಎಲ್ಲರ ಎದೆಯಲ್ಲಿ ಒಂಥರಾ ನಡುಕ ಶುರುವಾಗಿದೆ. ಈ ಬಾರಿ ಜೆಡಿಎಸ್ ನೆಲ ಕಚ್ಚುತ್ತದೆ ಎಂದು ಕೆಲವರು ಹೇಳಿದ್ರೇ ಮತ್ತೊಂದಿಷ್ಟು ಮಂದಿ ಜೆಡಿಎಸ್ ಗೆಲುವು ಶತ ಸಿದ್ಧ ಎನ್ನುತ್ತಿದ್ದಾರೆ. ಈ ಬಿಸಿಯ ನಡುವೆ ಜಡಿಎಸ್ ಪ್ರಚಾರ ಕಾರ್ಯ ಆರಂಭಿಸಿದೆ. ಮೈತ್ರಿ ಅಭ್ಯರ್ಥಿಗಳ ಪರ ಮತ ಪ್ರಚಾರಕ್ಕಾಗಿ  40 ಮಂದಿ ತಾರ ಪ್ರಚಾರಕರು ಬರುತ್ತಿದ್ದಾರೆ ಅವರು ಯಾರು ಯಾರು ಎಂಬ ಪಟ್ಟಿಯನ್ನು ಇದೀಗ ಜೆಡಿಎಸ್ ರಿಲೀಸ್ ಮಾಡಲಾಗಿದೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ , ಮುಖ್ಯಮಂತ್ರಿ ಕುಮಾರ ಸ್ವಾಮಿ  ಜೆಡಿಎಸ್ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ 40 ಮಂದಿ ಜೆಡಿಎಸ್‍ನ ಮುಖಂಡರು ತಾರಾ ಪ್ರಚಾರಕರಾಗಿ ಪಾಲ್ಗೊಳ್ಳಿದ್ದಾರೆ.ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶಂಪೂರ್, ಎಸ್.ಆರ್.ಶ್ರೀನಿವಾಸ್, ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ವೆಂಕಟರಾವ್‍ನಾಡಗೌಡ, ಸಾ.ರಾ.ಮಹೇಶ್, ಎಂ.ಸಿ.ಮನಗೂಳಿ ಅವರು ಜೆಡಿಎಸ್‍ನ ತಾರಾ ಪ್ರಚಾರಕರಾಗಿದ್ದಾರೆ. ಅಂದಹಾಗೇ  ಪಿ.ಜಿ.ಆರ್.ಸಿಂಧ್ಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಅವರು ಜೆಡಿಎಸ್ ತಾರಾ ಪ್ರಚಾರಕರಾಗಿ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಅನಿತಾಕುಮಾರಸ್ವಾಮಿ, ಡಾ.ಕೆ.ಅನ್ನದಾನಿ, ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಬಸವರಾಜ್ ಹೊರಟ್ಟಿ, ಬಿ.ಎಂ.ಫಾರೂಕ್, ಕಾಂತರಾಜು, ಮರಿತಿಬ್ಬೇಗೌಡ ಪಟ್ಟಿಯಲ್ಲಿದ್ದಾರೆ. ಇನ್ನುಳಿದಂತೆ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಎಸ್.ಎ.ನೀರಾವರಿ, ಎನ್.ಎಚ್.ಕೋನರೆಡ್ಡಿ, ಬಿ.ಬಿ.ನಿಂಗಯ್ಯ,ಕೆ.ಎಂ.ತಿಮ್ಮರಾಯಪ್ಪ, ರಮೇಶ್‍ಬಾಬು ಅವರು ಕೂಡ ಜೆಡಿಎಸ್‍ನ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಪಕ್ಷದ ಮುಖಂಡರಾದ ಪ್ರೊ.ಸಿ.ಎಸ್.ರಂಗಪ್ಪ, ಸೈಯದ್ ಮೊಹಿದ್ ಅಲ್ತಾಫ್, ಭವಾನಿರೇವಣ್ಣ, ಡಾ.ಸೂರಜ್ ರೇವಣ್ಣ, ಕೆ.ವಿ.ಅಮರನಾಥ್, ಸೈಯದ್ ಶಫಿವುಲ್ಲಾ ಸಾಹೇಬ್ ಹಾಗೂ ಎ.ಪಿ.ರಂಗನಾಥ್ ಅವರು ಜೆಡಿಎಸ್‍ನ ತಾರಾ ಪ್ರಚಾರಕರಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ರಾಜ್ಯಾದ್ಯಂತ ನಡೆಯುವ ಪಕ್ಷದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Edited By

hdk fans

Reported By

hdk fans

Comments