ಪ್ರಚಾರದ ವೇಳೆ ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ..!!!

02 Apr 2019 2:32 PM |
3045 Report

ಕೊಪ್ಪಳದಲ್ಲಿ ಪ್ರಚಾರದ ವೇಳೆ ಭಾಷಣ ಮಾಡುವ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಚುನಾವಣೆ ಬಳಿಕ ಸಿಎಂ ಕುಮಾರಸ್ವಾಮಿ ‘ನೆಗದು ಬೀಳ್ತಾರೆ’ ಎಂದು ಹೇಳಿದ್ದಾರೆ.ಚುನಾಚಣಾ ಪ್ರಚಾರದ ಬಿರುಸಿನಲ್ಲಿ ತಾವೇನು ಮಾತನಾಡುತ್ತಿದ್ದೇವೆ ಎಂಬ ಜ್ಞಾನ ಕೂಡ ಇರುವುದಿಲ್ಲ ಕೆಲ ನಾಯಕರಿಗೆ. ಇದೀಗ ರಾಜ್ಯ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ಬಿಜೆಪಿ ನಾಯಕ ಈಶ್ವರಪ್ಪ ಅವರು ವಿವಾದಾತ್ಮ ಹೇಳಿಕೆಯೊಂದನ್ನು ನೀಡಿ ಇದೀಗ ಜೆಡಿಎಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೈತ್ರಿ ಸರ್ಕಾರದ ಪರವಾಗಿ ಅಭ್ಯರ್ಥಿಯಾಗಿ ನಿಖಿಲ್ ಮಂಡ್ಯದಿಂದ ಕಣಕ್ಕಿಳಿದಿದ್ದಾರೆ. ಜಬರ್ದಸ್ತ್ ಫೈಟ್ ಕೊಡೋಕೆ ಇದೀಗ ಸ್ಟಾರ್ ಆ್ಯಕ್ಟರ್ ಗಳ ಜೊತೆ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಕೂಡ ಅಖಾಡಕ್ಕಿಳಿದಿದ್ದಾಗಿದೆ.ಕೊಪ್ಪಳದಲ್ಲಿ ಪ್ರಚಾರದ ವೇಳೆ ಭಾಷಣ ಮಾಡುವ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ತಮ್ಮ ನಾಲಿಗೆ ಹರಿ ಬಿಟ್ಟು  ‘ಚುನಾವಣೆ ಬಳಿಕ ಸಿಎಂ ಕುಮಾರಸ್ವಾಮಿ ನೆಗದು ಬೀಳ್ತಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ವೈರಲ್ ಆಗುತ್ತಿದ್ದಂತೇ ಕುಮಾರ ಸ್ವಾಮಿ ಅಭಿಮಾನಿಗಳು, ಹಾಗೂ ಜೆಡಿಎಸ್ ನಾಯಕರಿಂದ ಈಶ್ವರಪ್ಪ  ಅವರ ವಿರುದ್ಧ ಆಕ್ರೋಶ ವ್ಯಕ್ತವಾಘುತ್ತಿದೆ. ನೆಗೆದು ಬೀಳುತ್ತಾರೆ ಎಂದರೆ ಏನು, ಅವರೇನು ಚುನಾವಣೆ ಬಳಿಕ ಸತ್ತು ಹೋಗ್ತಾರಯೇ..? ನಿಮಗೇನಾದ್ರೂ ಭವಿಷ್ಯ ಹೇಳುತ್ತೀರಾ…ಎಂಬ ಪೋಸ್ಟ್ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Image result for eshwarappaಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಸರ್ಕಾರ ಬೀಳತ್ತೆ ಎನ್ನುವ ಭರದಲ್ಲಿ ಈಶ್ವರಪ್ಪ ಕುಮಾರಸ್ವಾಮಿಯೇ ನೆಗದು ಬಿದ್ದು ಹೋಗ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ, ಕುಮಾರಸ್ವಾಮಿಯೂ ನೆಗದು ಬಿದ್ದು ಹೋಗ್ತಾರೆ, ಸರ್ಕಾರವೂ ಬಿದ್ದು ಹೋಗತ್ತೆ ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಇಶ್ವರಪ್ಪ ಅವರ ಮೇಲೆ  ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಜೆಡಿಎಸ್ ಈ ಬಾರಿ ಒಂದು ಸೀಟು ಗೆಲ್ಲಲ್ಲ ಬರೆದಿಟ್ಟು ಕೊಳ್ಳಿ. ಮುಂದಿನ ಪ್ರದಾನ ಮಂತ್ರಿ ಮೋದಿಯೇ ಆಗ್ತಾರೆ. ನಾವೇ ಹೆಚ್ಚು ಸ್ಥಾನ ಗೆಲ್ತೀವಿ ಎಂದಿದ್ದಾರೆ.

Edited By

hdk fans

Reported By

hdk fans

Comments