ಅಂಬಿ ಹಾಗೂ ಸುಮಲತಾ, ಬಗ್ಗೆ ವಿವಾದಾತ್ಮಾಕ ಹೇಳಿಕೆ ಕೊಟ್ಟ ಜೆಡಿಎಸ್ ಸಂಸದ..!!

01 Apr 2019 11:04 AM |
4231 Report

ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಮಂಡ್ಯ ಲೋಕಸಭಾ ಅಖಾಡ ರಣರಂಗವಾಗುತ್ತಿದೆ.. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದ್ದಿದಾಗಿದೆ… ಈ ಕಡೆ ಮೈತ್ರಿ ಸರ್ಕಾರದಿಂದ ನಿಖಿಲ್ ಕಣಕ್ಕೆ ಇಳಿದಿದ್ದಾರೆ..  ಇದೆಲ್ಲದರ ನಡುವೆ ಇದೀಗ ಜೆಡಿಎಸ್ ಸಂಸದ ಎಲ್ ಆರ್ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದಾರೆ.

ಸುಮಲತಾ ಅಂಬರೀಶ್  ಮಂಡ್ಯ ಗೌಡ್ತಿ ಅಲ್ಲ, ಅಂಬರೀಶ್ ದಾನ ಶೂರ ಕರ್ಣರಾಗಿ ಯಾರಿಗೆ ಏನು ಕೊಟ್ಟಿದ್ದಾರೆ. ರಮ್ಯಾರನ್ನು ಓಡಿಸಿದ್ದೆ ನಾನು. ಸುಮಲತಾ ಹುಚ್ಚೆಗೌಡರ ಸೊಸೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ನಾಯ್ಡು ಆಗಿದ್ದಾರೆ. ಎಂದು ಹೇಳಿದ್ದು ಬೇರೆ ಯಾರು ಅಲ್ಲ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೇಗೌಡ. ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂಬರೀಶ್ ಅಂತ್ಯ ಸಂಸ್ಕಾರದ ವೇಳೆ ಜನಸಾಗರ ಕಂಡು ಸುಮಲತಾ ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಆಗ ಜನರನ್ನು ಕಂಡಿದ್ದ ಸುಮಲತಾ ಇದೀಗ ಎಲೆಕ್ಷನ್ ಗೆ ಬಂದಿದ್ದಾರೆ. ಅಷ್ಟೆ ಅಲ್ಲದೆ ಸುಮಲತಾ ಒಕ್ಕಲಿಗರಾ ಎಂದು ಪ್ರಶ್ನೆ ಮಾಡಿದ್ದಾರೆ… ಅಂಬರೀಶ್ ಅವರನ್ನು ಮಂಡ್ಯ ರಾಜಕೀಯಕ್ಕೆ ಕರೆತಂದಿದ್ದೆ ನಾವು. ಅಂಬರೀಶ್ ಕರೆದುಕೊಂಡು ಬಂದೆವು. ಆತ ಏನು ಮಾಡಿದ್ದಾನೆ ಎಂದು ಮಂಡ್ಯಕ್ಕೆ ಸಾಕ್ಷಿ ಬೇಕಲ್ಲಾ..? ಅಂಬರೀಶ್ ಗೆ ದಾನ ಶೂರ ಕರ್ಣ ಎಂಬ ಬಿರುದು ಬೇರೆ, ಯಾರು ಯಾರಿಗೆ ಏನು ದಾನ ಮಾಡಿದ್ದಾರೋ ಗೊತ್ತಿಲ್ಲ. ನಾನೇ ಅಂಬರೀಶ್ ರನ್ನು ಕರೆದುಕೊಂಡು ಬಂದಿದ್ದು, ಸೋಲಿಸಿದ್ದೂ ನಾನೇ. ಅಷ್ಟೇ ಅಲ್ಲ,  ಸುರೇಶ್ ಗೌಡ ಕರೆತಂದಿದ್ದ ರಮ್ಯಾ ಅವರನ್ನು ಓಡಿಸಿದ್ದೇನೆ. ನಾನು ನಾಗಮಂಗಲದ ಗಂಡು ಎಂದೆಲ್ಲಾ ಶಿವರಾಮೇಗೌಡ ಹೇಳಿದ್ದಾರೆ ಎನ್ನಲಾಗಿದೆ…ಒಟ್ಟಿನಲ್ಲಿ ಲೋಕ ಸಮರವು ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳನ್ಜು ತಂದಿವೆ… ಲೋಕಸಭಾ ಚುನಾವಣೆಯು ಬರುವುದರೊಳಗೆ  ರಾಜಕೀಯ ವಲಯದಲ್ಲಿ ಸಾಕಷ್ಟು ಅಲ್ಲೋಲ್ಲ ಕಲ್ಲೋಲ್ಲಗಳು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ…       

Edited By

hdk fans

Reported By

hdk fans

Comments