ಎತ್ತಿನಹೊಳೆ ನೀರನ್ನು ಹೇಗೆ ತರುತ್ತಾರೆ? ಬಕೇಟ್ ನಲ್ಲಾ? ಲೋಟದಲ್ಲಾ?




ದಿನಾಂಕ 30-03-2019 ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ರಾಜಘಟ್ಟದಲ್ಲಿರುವ ಶ್ರೀಪ್ರಸನ್ನ ಆಂಜನೇಯಸ್ವಾಮಿಯವರಿಗೆ ಪೂಜೆಯನ್ನು ಸಲ್ಲಿಸಿ, ಸ್ವಾಮಿಯವರ ಅಶೀರ್ವಾದವನ್ನು ಪಡೆದು ಮನೆ ಮನೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಆಗಮಿಸಿದ್ದರು.
ನಂತರ ಮಾತನಾಡಿದ ಶರತ್ ಬಚ್ಚೇಗೌಡ ಪೂರ್ವ ಜನ್ಮದ ಪುಣ್ಯದಿಂದಾಗಿ ನಮಗೆ ನರೇಂದ್ರ ಮೋದಿಯಂತ ನಾಯಕ ಸಿಕ್ಕಿದ್ದಾರೆ, ಮುಂದಿನ ಐದು ವರ್ಷಗಳಕಾಲ ಅವರನ್ನೇ ಪ್ರಧಾನಿಯನ್ನಾಗಿ ಮುಂದುವರೆಸಲು ನಮಗೆ ಮತ್ತೊಂದು ಅವಕಾಶ ಸಿಕ್ಕಿದೆ, ನಾವು ಮನೆಮನೆಗೆ ಹೋಗಿ ಜಾತ್ಯಾತೀತವಾಗಿ ಮತ ಯಾಚಿಸೋಣ, ಬೇರೆ ಪಕ್ಷಗಳ ಗೊಡವೆ ನಮಗೆ ಬೇಕಿಲ್ಲ, ಕಳೆದ ಹತ್ತು ವರ್ಷಗಳಿಂದ ಲೋಕಸಭಾ ಸದಸ್ಯರಾಗಿರೋ ಮೊಯಿಲಿಯವರ ಸಾಧನೆ ಇಲ್ಲಿ ಶೂನ್ಯ, ಬರೀ ಎತ್ತಿನಹೊಳೆ ನೀರು ತರುತ್ತೀನಿ ಎಂದು ಹೇಳುತ್ತಾ ಕಾಲ ಹಾಕಿದ್ದಾರೆ, ನೀರನ್ನು ಹೇಗೆ ತರುತ್ತಾರೆ? ಬಕೇಟ್ ನಲ್ಲಾ? ಲೋಟದಲ್ಲಾ? ಎಂದು ಪ್ರಶ್ನಿಸಿದರು.
ಪೂಜೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕೆ.ಎಂ.ಹನುಮಂತರಾಯಪ್ಪ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಸತ್ಯನಾರಾಯಣಗೌಡ ಸೇರಿದಂತೆ ತಾಲ್ಲೂಕು ಹಾಗೂ ನಗರದ ಎಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾದ ಅಧ್ಯಕ್ಷರು, ಕಾರ್ಯದರ್ಶಿಗಳು, ಬೂತ್ ಮಟ್ಟದ ಎಲ್ಲಾ ಸದಸ್ಯರು, ಬಿಜೆಪಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Comments