ಚುನಾವಣೆಗೂ ಮುನ್ನವೇ ಜೆಡಿಎಸ್ ಮುಂದೆ ಸೋಲೊಪ್ಪಿಕೊಂಡ ಶಾಸಕ..!!

29 Mar 2019 3:25 PM |
14595 Report

ಲೋಕ ಸಮರದ ಹಿನ್ನಲೆಯಲ್ಲಿ ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ಸಲ್ಲಿಸಿದ ನಾಮಪತ್ರಗಳನ್ನು ಹಿಂಪಡೆಯಲು ಇಂದೂ ಕೊನೆ ದಿನವಾಗಿದೆ. ತುಮಕೂರು ಕ್ಷೇತ್ರದಲ್ಲಿ ಕೈ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮುದ್ದಹನುಮೇಗೌಡ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ಹಿಂಪಡೆಯುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ತುಮಕೂರು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡ ಸಹಮತ ವ್ಯಕ್ತಪಡಿಸುತ್ತಾರಾ ಎನ್ನೋದು ಕುತೂಹಲದ ಪ್ರಶ್ನೆಯಾಗಿದೆ.  

ನಿಮಗೆ ಕ್ಷೇತ್ರ ತಪ್ಪಿಸುವ ಯಾವ ಉದ್ದೇಶವು ಇರಲಿಲ್ಲ. ರಾಷ್ಟ್ರೀಯ ಮಟ್ಟದ ದೃಷ್ಟಿಯಿಂದ ಕೆಲವೊಂದು ತೀರ್ಮಾನ ಮಾಡಬೇಕಾಯಿತು. ಪಕ್ಷದ ಹಿತದೃಷ್ಟಿಯಿಂದಷ್ಟೇ ತುಮಕೂರು ಕ್ಷೇತ್ರವನ್ನ ಜೆಡಿಎಸ್‌ ಗೆ ಬಿಟ್ಟುಕೊಟ್ಟಿದ್ದೇವೆ. ಯಾವ ಕಾರಣಕ್ಕೂ ನಿಮನ್ನ ಕಡೆಗಣಿಸುವುದಿಲ್ಲ. ಸೂಕ್ತ‌ ಕಾಲದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆಯನ್ನುರಾಹುಲ್ ಗಾಂಧಿಯಿಂದ ಮುದ್ದಹನುಮೇಗೌಡ ಅವರಿಗೆ ನೀಡಿದ್ದಾರಂತೆ.  ರಾಹುಲ್ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೂಡ ಚರ್ಚೆ ನಡೆಸಿದ್ದಾರೆ. ರಾಜ್ಯ ನಾಯಕರ ಮಾತಿಗೆ ಸೊಪ್ಪು ಹಾಕದ ಮುದ್ದಹನುಮೇಗೌಡ ‌ಕೊನೆಗೂ ‌ಪಟ್ಟು ಡಸಡಿಲಿಸಿ ನಾಮಪತ್ರವನ್ನು ಹಿಂಪಡೆದಿದ್ದಾರೆ.. ತುಮಕೂರು ಜನ ದೇವೆಗೌಡರಿಗೆ ಅಧಿಕಾರದ ಗದ್ದುಗೆಯನ್ನು ವಹಿಸುತ್ತಾರೋ ಖಾದು ನೋಡಬೇಕಿದೆ.

Edited By

hdk fans

Reported By

hdk fans

Comments