ಈ ಕ್ಷೇತ್ರಕ್ಕೆ ಇನ್ನೂ ಜೆಡಿಎಸ್ ಅಭ್ಯರ್ಥಿನೇ ಫೈನಲ್ ಆಗಿಲ್ವಂತೆ..!!

26 Mar 2019 12:50 PM |
4002 Report

ಈಗಾಗಲೇ ಲೋಕಸಮರದ ಹಿನ್ನಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಕೂಡ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿದೆ… ಆದರೆವಿಜಯಪುರ ಕ್ಷೇತ್ರಕ್ಕೆ ಜೆಡಿಎಸ್ ಇದುವರೆಗೂ ಅಭ್ಯರ್ಥಿ ಘೋಷಣೆಯಾಗದಿರುವುದು ತೀವ್ರ ಕುತೂಹಲ ಕೆರಳಿಸಿದೆ.ಮೂಲಗಳ ಪ್ರಕಾರ ಮೀಸಲು ಕ್ಷೇತ್ರಕ್ಕೆ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ್ ಪತ್ನಿ ಹಾಗೂ ಅವರ ಸಹೋದರ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ..

ಜೆಡಿಎಸ್ ಶಾಸಕ ದೇವಾನಂದ ಪತ್ನಿ ಮತ್ತು ಆತನ ಸಹೋದರರ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ಏರ್ಪಟ್ಟಿದ್ದು, ಮೀಸಲು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಇದೀಗ ಬೆಂಬಲಿಗರಲ್ಲಿ ಮೂಡಿದೆ. ಅದರಂತೆ ದೇವಾನಂ ಚ್ಹಾವಣ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯ ಆರಂಭವಾಗಿದ್ದರೂ ಕೂಡ ಅಭ್ಯರ್ಥಿ ಘೋಷಣೆಯಾಗದಿರುವುದು ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ವಿಜಯಪುರದಲ್ಲಿ ಜೆಡಿಎಸ್ ಸೋಲಿನ ಭಯ ಉಂಟಾಗಿದೆ ಎನ್ನಬಹುದು.

Edited By

hdk fans

Reported By

hdk fans

Comments