ಬಚ್ಚೇಗೌಡ, ಮೊಯಿಲಿ, ದ್ವಾರಕಾನಾಥ್, ವರಲಕ್ಷ್ಮಿ ನಾಮಪತ್ರ ಸಲ್ಲಿಕೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಬಿ.ಎನ್.ಬಚ್ಚೇಗೌಡ ದಿನಾಂಕ ೨೫-೩-೨೦೧೯ ರಂದು ತಮ್ಮ ನಾಮ ಪತ್ರ ಸಲ್ಲಿಸಿದರು, ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಪಿ. ಅನಿರುಧ್ ಶ್ರವಣ್ ರವರಿಗೆ ಮಧ್ಯಾನ್ಹ ೧-೩೦ ಕ್ಕೆ ನಾಮಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಮುಖವಾಡ ಹಾಕಿದ್ದ ಕಾರ್ಯಕರ್ತರು ಕೇಸರಿ ಬಾವುಟ ಮತ್ತು ಪಕ್ಷದ ಬಾವುಟ ಹಿಡಿದಿದ್ದರು, ಡೊಳ್ಳು ಕುಣಿತ. ಗಾರುಡಿ ಗೊಂಬೆ ಮತ್ತಿತರ ಕಲಾ ತಂಡಗಳು ಸಾಥ್ ನೀಡಿದವು, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕಟ್ಟ ಸುಬ್ರಮಣ್ಯ ನಾಯ್ಡು ಮತ್ತಿತರ ಬಾಜಪ ನಾಯಕರು ಜೊತೆಯಲ್ಲಿದ್ದರು.
ಇಂದು ಬೆಳಿಗ್ಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದು ಹ್ಯಾಟ್ರಿಕ್ ಹೊಡೆಯಲು ತಮ್ಮೆಲ್ಲಾ ಅಭಿಮಾನಿಗಳೊಂದಿಗೆ ಆಗಮಿಸಿದ ಹಾಲಿ ಸಂಸದ ವೀರಪ್ಪ ಮೊಯಿಲಿ ತಮ್ಮ ನಾಮಪತ್ರ ಸಲ್ಲಿಸಿದರು. ದೊಡ್ದಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಜೊತೆಯಲ್ಲಿದ್ದರು. ಬಿ.ಎಸ್.ಪಿ ಪಕ್ಷದ ಅಭ್ಯರ್ಥಿಯಾಗಿ ಸಿ.ಎಸ್. ದ್ವಾರಕಾನಾಥ್ ಹಾಗೂ ಸಿ.ಪಿ.ಎಂ ನಿಂದ ಎಸ್.ವರಲಕ್ಷ್ಮಿ, ಪಕ್ಷೇತರ ಅಬ್ಯರ್ಥಿಗಳಾಗಿ ಗೌರಿಬಿದನೂರಿನ ಜಿ.ಎನ್.ರವಿ, ಯಲಹಂಕದ ಬಿ.ಎಂ.ನಾರಾಯಣಸ್ವಾಮಿ, ಅಟ್ಟೂರಿನ ಎನ್. ರಮೇಶ್, ಕೆ.ಎಸ್. ನಳಿನಾ, ಫಣಿರಾಜ್ ಇಂದು ಬೆಳಿಗ್ಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.
Comments