ಸುಮಲತಾಗೆ ಸಿಎಂ 'ಮಾಸ್ಟರ್ ಸ್ಟ್ರೋಕ್'..!! ಶಾಕ್ ಆದ ರೆಬಲ್ ಪತ್ನಿ..!!!
ಈಗಾಗಲೇ ಲೋಕ ಸಮರಕ್ಕೆ ದಿನಗಣನೆ ಪ್ರಾರಂಭವಾಗಿದೆ.. ಮಂಡ್ಯ ಲೋಕಸಭೆ ಚುನಾವಣೆಯ ಅಖಾಡ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ... ಹೈವೋಲ್ಟೇಜ್ ಅಖಾಡವಾಗಿರುವ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ನಡುವೆ ಗೆಲುವಿಗೆ ಪೈಪೋಟಿ ನಡೆಯುತ್ತಿದೆ.. ಇಬ್ಬರು ಕೂಡ ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ..
ಮಗನ ಗೆಲುವಿಗಾಗಿ ಶತಾಯ ಗತಾಯ ಟೊಂಕಕಟ್ಟಿ ನಿಂತಿರುವ ಸಿಎಂ ಕುಮಾರಸ್ವಾಮಿ ಇದೀಗ ಮಂಡ್ಯದಲ್ಲಿಯೇ ಬೀಡು ಬಿಟ್ಟಿದ್ದಾರೆ. ಸುಮಲತಾ ಅಂಬರೀಶ್ ಬೆಂಬಲ ಕೋರಿದ್ದ ಮುಖಂಡರನ್ನೇ ತನ್ನತ್ತಾ ಸೆಳೆದುಕೊಂಡಿದ್ದಾರೆ. ಮತ್ತೆ ಹಲವರನ್ನು ಸೆಳೆಯಲು ಕುಮಾರಸ್ವಾಮಿಯವರು ಮುಂದಾಗಿದ್ದಾರೆ. ಕಳೆದ ವಾರವಷ್ಟೇ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯ ಬಿಜೆಪಿಯ ಪ್ರಭಾವಿ ಮುಖಂಡ ಬಿ. ಶಿವಲಿಂಗಯ್ಯ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಶಿವಲಿಂಗಯ್ಯ, ಸುಮಲತಾ ಅವರಿಗೆ ಬೆಂಬಲ ನೀಡುವ ಭರವಸೆ ಕೂಡ ನೀಡಿದ್ದಾರೆ. ಆದರೆ, ಶಿವಲಿಂಗಯ್ಯ ಅವರನ್ನೇ ಜೆಡಿಎಸ್ ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಿಎಂ ಕುಮಾರಸ್ವಾಮಿ ರಾಜಕೀಯ ತಂತ್ರಗಾರಿಕೆ ನಡೆಸಿದ್ದಾರೆ. ಒಟ್ಟಾರೆಯಾಗಿ ಮಗನ ಗೆಲುವುಗಾಗಿ ಸಿಎಂ ಕುಮಾರಸ್ವಾಮಿಯವರು ಟೊಂಕಕಟ್ಟಿ ನಿಂತಿದ್ದಾರೆ ಸುಮಲತಾ ವಿರುದ್ದ ಗೆಲ್ಲಲ್ಲೆ ಬೇಕು ಎಂಬುದು ದೋಸ್ತಿ ಸರ್ಕಾರದ ನಿಲುವಾಗಿದೆ.. ಸುಮಲತಾ ಬಿಜೆಪಿಯು ಕೂಡ ಬೆಂಬಲಿಸುತ್ತಿದೆ… ಈ ಲೋಕ ಯುದ್ದದಲ್ಲಿ ಗೆದ್ದು ಯಾರು ಮಂಡ್ಯ ಜನರ ಸೇವೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
Comments