ಬಿಗ್ ಬ್ರೇಕಿಂಗ್: ’ಬಿಜೆಪಿ’ಗೆ ಗುಡ್ ಬೈ ಹೇಳಿ ‘ತೆನೆ ಹೊತ್ತ’ ಶಾಸಕ..!!
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವುದು ಕಾಮನ್ ಆಗಿ ಬಿಟ್ಟಿದೆ.. ಈಗಾಗಲೇ ಎ ಮಂಜು, ಉಮೇಶ್ ಜಾಧವ್ ದೋಸ್ತಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ.. ಇದೇ ಹಿನ್ನಲೆಯಲ್ಲಿ ಇದೀಗ ಮಾಜಿ ಶಾಸಕ ಎಚ್.ಬಿ. ನಂಜೇಗೌಡ ಅವರು ಬಿಜೆಪಿ ತೊರೆದು ಭಾನುವಾರ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆಗೆ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್‌ರೊಂದಿಗೆ ತೆರಳಿದ ನಂಜೇಗೌಡರು ಮಾತೃ ಪಕ್ಷ ಜೆಡಿಎಸ್‌ಗೆ ಸೇರ್ಪಡೆಗೊಂಡರು. ಈ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಗುರು ದೇವೇಗೌಡರೇ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಗೆಲುವಿಗೆ ಶ್ರಮಿಸುವುದು ನನ್ನ ಕರ್ತವ್ಯ ಎಂದು ತಿಳಿಸಿದರು. ಒಟ್ಟಾರೆಯಾಗಿ ಲೋಕ ಸಮರ ಮುಗಿಯುವುದರೊಳಗೆ ಯಾರು ಯಾಪ ಪಕ್ಷಕ್ಕೆ ಸೇರಿಕೊಳ್ಳುತ್ತಾರೋ ಗೊತ್ತಿಲ್ಲ.. ಒಂದು ದೋಸ್ತಿ ಕೈ ಕೊಡುತ್ತಿರುವ ಶಾಸಕರು.. ಮತ್ತೊಂದು ಕಡೆ ದೋಸ್ತಿಗೆ ಸೇರುತ್ತಿರುವ ಶಾಸಕರು ಇದಲ್ಲವನ್ನು ನೋಡುತ್ತಿದ್ದಾರೆ ರಾಜಕೀಯ ಎಂಬುದು ದೊಂಬರಾಟ ಎಂಬುದು ಸಾಬೀತಾಗುತ್ತದೆ.
Comments