8 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿ ಫಿಕ್ಸ್..! ಯಾರಿಗೆ ಯಾವ ಕ್ಷೇತ್ರ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
ಈಗಾಗಲೇ ಲೋಕ ಸಮರಕ್ಕೆ ಎಲ್ಲಾ ಪಕ್ಷದವರು ಸಿದ್ದವಾಗುತ್ತಿದ್ದಾರೆ.. ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ಪಕ್ಷವು 12 ಕ್ಷೇತ್ರಗಳ ಬೇಡಿಕೆಯನ್ನು ಕಾಂಗ್ರೆಸ್ ಮುಂದಿಟ್ಟಿತ್ತು.. ಆದರೆ ಕೊನೆಗೆ 8 ಕ್ಷೇತ್ರಗಳು ಫೈನಲ್ ಆಗಿವೆ.. ದೇವೇಗೌಡರ ಸ್ಪರ್ಧೆ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲವನ್ನು ಕೆರಳಿಸಿತ್ತು. ಇಂದು ಸ್ವತಃ ದೇವೇಗೌಡರೇ ತುಮಕೂರಿನಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ. ಈಗಾಗಲೇ ತುಮಕೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ವಿಜಾಪುರ ಕ್ಷೇತ್ರದ ಅಭ್ಯರ್ಥಿ ಹೆಸರು ಮಾತ್ರ ಅಂತಿಮಗೊಳಿಸುವುದು ಬಾಕಿ ಉಳಿದಿದೆ ಎಂದು ಹೇಳಿದರು.
ತುಮಕೂರು-ದೇವೆಗೌಡರು
ಮಂಡ್ಯ-ನಟ ನಿಖಿಲ್ ಕುಮಾರಸ್ವಾಮಿ,
ಹಾಸನ- ಪ್ರಜ್ವಲ್ ರೇವಣ್ಣ,
ಉಡುಪಿ-ಚಿಕ್ಕಮಗಳೂರು ಪ್ರಮೋದ್ ಮಧ್ವರಾಜ್
ಶಿವಮೊಗ್ಗ- ಮಧು ಬಂಗಾರಪ್ಪ,
ಉತ್ತರ ಕನ್ನಡ- ಆನಂದ್ ಅಸ್ನೋಟಿಕರ್ ಅವರ ಹೆಸರುಗಳನ್ನು ಜೆಡಿಎಸ್ ಅಂತಿಮಗೊಳಿಸಿದೆ.
ಬೆಂಗಳೂರು ಉತ್ತರ ಹಾಗೂ ವಿಜಾಪುರ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಬೇಕಿದೆ.. ಒಟ್ಟಾರೆಯಾಗಿ ಅಭ್ಯರ್ಥಿಗಳು ಫೈನಲ್ ಆಗಿದ್ದು ಚುನಾವಣೆಯನ್ನು ಎದುರಿಸುವುದಷ್ಟೆ ಬಾಕಿ.. ಇವರಲ್ಲಿ ಯಾರು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments