'ಸ್ವಾಭಿಮಾನ ಬಿಟ್ಟು ಭಿಕ್ಷೆ ಬಿಡಲ್ಲ' ಸಿಎಂ HDK ಹೀಗೆ ಹೇಳಿದ್ದು ಯಾರಿಗೆ..?
ಮಂಡ್ಯ ಲೋಕಸಭಾ ಚುನಾವಣೆಯು ಸಿಕ್ಕಾಪಟ್ಟೆ ರಂಗೇರುತ್ತಿದೆ.. ಒಂದು ಕಡೆ ದೋಸ್ತಿಗಳ ಪೈಪೋಟಿ ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಪೈಪೋಟಿ.. ಇಬ್ಬರು ಜಿದ್ದಾಜಿದ್ದಿಗೆ ಬಿದ್ದಿರೋದಂತು ಸುಳ್ಳಲ್ಲ… ಮಂಡ್ಯ ಖಾಡ ಹೋವೋಲ್ಟೇಜ್ ಅಖಾಡವಾಗಿ ಮಾರ್ಪಟ್ಟಿದೆ.. ದೋಸ್ತಿಗಳಲ್ಲೂ ಕೂಡ ಭಿನ್ನಮತ ಏರ್ಪಟ್ಟಿದೆ.. ಕಾಂಗ್ರೆಸಿಗ್ಗರು ಕೂಡ ಯಾಕೋ ಕುಮಾರಸ್ವಾಮಿಯವರ ಜೊತೆ ಅಸಮಾಧಾನಗೊಂಡಿರುವ ಆಗಿದೆ. ಈ ವಿಷಯವಾಗಿಯೂ ಮಂಡ್ಯ ಕಾಂಗ್ರೆಸಿಗರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಾಭಿಮಾನ ಕಳೆದುಕೊಂಡು ಯಾರ ಮುಂದೆಯೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಮಂಡ್ಯದಲ್ಲಿ ಕೆಲ ಕಾಂಗ್ರೆಸಿಗರು ತುಂಬ ಮುಂದೆ ಹೋಗಿದ್ದಾರೆ. ಅಂಥವರ ಮುಂದೆ ಸ್ವಾಭಿಮಾನ ಕಳೆದುಕೊಂಡು ಅವರ ಬಳಿ ಹೋಗುವುದಿಲ್ಲ ಎಂದು ತಿಳಿಸಿದರು..ಕೆಲವರು ಹಿಂಬಾಗಿಲಿನಿಂದ ಬಹಳ ಮುಂದೆ ಹೋಗಿದ್ದು, ಅಂಥವರ ಮುಂದೆ ಭಿಕ್ಷೆ ಬೇಡುವುದಿಲ್ಲ. ನನಗೆ ನಮ್ಮ ಕಾರ್ಯಕರ್ತರೇ ಸಾಕು. ಅವರು ಚುನಾವಣೆ ಎದುರಿಸಲು ಸಮರ್ಥರಾಗಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ನನಗೆ ಬೆನ್ನಿಗೆ ಚೂರಿ ಹಾಕುವವರು ಬೇಕಾಗಿಲ್ಲ. ಮೂಲ ಕಾಂಗ್ರೆಸಿಗರು ತಮ್ಮ ಪುತ್ರ ಹಾಗೂ ನಟ ನಿಖಿಲ್‍ಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ್ದಾರೆ. ಮೈತ್ರಿ ಒಪ್ಪಂದದಂತೆ ನಮಗೆ ಸಂಪೂರ್ಣ ಬೆಂಬಲ ದೊರಕಿದೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿ ಯಾವುದೇ ಒಡಕಿಲ್ಲ ಎಂದು ಸ್ಪಷ್ಟಪಡಿಸಿದರು.ಒಟ್ಟಾರೆಯಾಗಿ ಹೈವೋಲ್ಟೇಜ್ ಚುನಾವಣೆಯಲ್ಲಿ ಯಾರು ಗೆದ್ದು ಗೆಲುವಿನ ನಗೆ ಬೀರುತ್ತಾರೆ ಎಂದು ಕಾದು ನೋಡಬೇಕಿದೆ.
Comments