ಸುಮಲತಾರನ್ನು ಕಟ್ಟಿಹಾಕಲು `ಜೆಡಿಎಸ್' ನಿಂದ ಬಿಗ್ ಮಾಸ್ಟರ್ ಪ್ಲಾನ್..!

18 Mar 2019 10:59 AM |
8476 Report

ಈಗಾಗಲೇ ಮಂಡ್ಯ ಲೋಕಸಭಾ ಅಖಾಡ ಸಿಕ್ಕಾಪಟ್ಟೆ ಸದ್ದುಮಾಡುತ್ತಿದೆ. ಒಂದು ಕಡೆ ದೋಸ್ತಿ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಕಡೆ ಸುಮಲತಾ ಅಂಬರೀಶ್ ಈಗಾಗಲೇ ಮಂಡ್ಯದಲ್ಲಿ ಚುನಾವಣ ಪ್ರಚಾರವನ್ನು ಭರ್ಜರಿಯಿಂದ ನಡೆಸುತ್ತಿದ್ದಾರೆ. ಮಂಡ್ಯ ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ.,. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಒಂದು ವೇಳೆ ನಿಂತುಕೊಂಡರೆ ಜೆಡಿಎಸ್ ಗೆ ಗೆಲುವಿನ ಹಾದಿ ಸ್ವಲ್ಪ ಕಷ್ಟವಾಗಬಹುದು. ಹಾಗಾಗಿ ಸುಮಲತಾ ಅವರನ್ನು ಕಣದಿಂದ ಹಿಂದೆ ಸರಿಸಲು ದೋಸ್ತಿ ಸರ್ಕಾರ ಬಿಗ್ ಪ್ಲ್ಯಾನ್ ಮಾಡಿದೆ.

ಇದೀಗ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ರನ್ನು ಕಟ್ಟಿಹಾಕಲು ಜೆಡಿಎಸ್ ಬಿಗ್ ಪ್ಲಾನ್ ವೊಂದನ್ನು ಮಾಡಿದೆ. ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮಹಿಳಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಜೆಡಿಎಸ್ ಪ್ಲ್ಯಾನ್ ಮಾಡಿದ್ದು, ಪ್ರಚಾರದಲ್ಲಿ ಸುಮಲತಾರ ಮೇಲೆ ಅನುಕಂಪ ತೋರುತ್ತಲ್ಲೇ ಜೆಡಿಎಸ್ ಮಹಿಳಾ ಕಾರ್ಯಕರ್ತರು ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಹಾಗಾಗಿ  ಜೊತೆಗೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತೆಯರು ಮಹಿಳಾ ಮತದಾರರಿಗೆ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಸುಮಲತಾ ಮೇಲಿರುವ ಅನುಕಂಪದ ಮತಗಳನ್ನು ಜೆಡಿಎಸ್ ಪರ ಮಾಡಿಕೊಳ್ಳಬೇಕು ಎಂದು ದೋಸ್ತಿ ಸರ್ಕಾರ ಪ್ರಯತ್ನ ಪಡುತ್ತಿದೆ.

Edited By

hdk fans

Reported By

hdk fans

Comments