ಮೋದಿಗಾಗಿ ಮತದಾನ ಮಾಡಿ, ಅಭ್ಯರ್ಥಿಗಾಗಿ ಅಲ್ಲ!
ನಿಮ್ಮ ಜಿಲ್ಲೆಯ ಅಭ್ಯರ್ಥಿಯನ್ನು ಬದಲಾಯಿಸಲು ಹೋಗಿ ಪ್ರಧಾನಮಂತ್ರಿಯನ್ನು ಬದಲಾಯಿಸಬೇಡಿ! ಮೋದಿಗಾಗಿ ಮತದಾನ ಮಾಡಿ, ಅಭ್ಯರ್ಥಿಗಾಗಿ ಅಲ್ಲ! ಈ ಮಾತು ನಾವು ಬಹಳ ದಿನಗಳಿಂದ ಕೇಳಿಕೊಂಡು ಬರುತ್ತಿದ್ದೇವೆ, ಪಕ್ಕಾ ಬಿಜೆಪಿ ಅಭಿಮಾನಿ, ಪಕ್ಷಕ್ಕಾಗಿ ತನ್ನ ಸ್ವಂತ ಕೆಲಸವನ್ನೂ ಬಿಟ್ಟು ಶ್ರಮಿಸುವ ಕೆಲ ಕಾರ್ಯಕರ್ತರ ಬಾಯಲ್ಲೂ ಒಂದೇ ಮಾತು, ನಮಗೆ ಮೋದಿ ಬೇಕು ಆದರೆ ನಮ್ಮ ಜಿಲ್ಲೆಯ ಅಭ್ಯರ್ಥಿ ಬೇಡ! ಹೌದು, ಈ ಒಂದು ಅಭಿಯಾನ ಆರಂಭಿಸಿದ ಒಂದು ವಿರೋಧಿ ಪಡೆ ಯಾವ ರೀತಿ ತಮ್ಮ ತೀಟೆ ತೀರಿಸಿಕೊಂಡರು ಎಂದರೆ ಇತ್ತೀಚಿಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲೂ ಕೂಡ ಬಿಜೆಪಿ ಸೋಲಲು ಕಾರಣ ಇದುವೇ. ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆ ಆಗಿಲ್ಲ, ಕೇಂದ್ರ ಸರಕಾರದ ವಿರುದ್ಧ ಜನರು ಅಸಮಧಾನ ವ್ಯಕ್ತಪಡಿಸುತ್ತಿಲ್ಲ, ಕೇಂದ್ರ ಸರಕಾರದ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂಬ ಆರೋಪವಿಲ್ಲ, ಆದರೂ ಬಿಜೆಪಿಗೆ ಸೋಲಾಯಿತಲ್ಲ ಎಂದು ಕಾರಣ ಹುಡುಕಿದಾಗ ಸಿಕ್ಕ ಸತ್ಯಾಂಶ ಕಂಡು ಸ್ವತಃ ಬಿಜೆಪಿ ರಾಷ್ಟ್ರೀಯ ನಾಯಕರೇ ದಂಗಾಗಿದ್ದರು.
ಯಾಕೆಂದರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಅಥವಾ ಪ್ರಧಾನಿ ಮೋದಿಯ ವಿರುದ್ಧ ಯಾರೂ ಅಸಮಧಾನ ವ್ಯಕ್ತಪಡಿಸಲಿಲ್ಲ, ಬದಲಾಗಿ ತಮ್ಮ ಕ್ಷೇತ್ರದ ಅಭ್ಯರ್ಥಿ ಸರಿ ಇಲ್ಲ ಎಂಬ ಕಾರಣಕ್ಕೆ “ನೋಟಾ” ಮತದಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅದರ ಪರಿಣಾಮ ಬೀರಿದ್ದು ಮಾತ್ರ ಮೋದಿಯವರ ಮೇಲೆ, ಯಾಕೆಂದರೆ ದೇಶಾದ್ಯಂತ ಮೋದಿಯ ವರ್ಚಸ್ಸು ಕಡಿಮೆ ಆಯ್ತು ಎಂದು ವಿರೋಧಿಗಳು ಡಂಗೂರ ಸಾರಲು ಆರಂಭಿಸಿದರು. ತಾವು ಮಾಡಿದ ಪ್ರಯತ್ನ ಯಶಸ್ವಿಯಾಗುತ್ತಿದ್ದಂತೆ ಇದೀಗ ಮುಂದಿನ ಲೋಕಸಭಾ ಚುನಾವಣೆಗೂ ಇದೇ ಕಾರ್ಯತಂತ್ರದ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ವಿರೋಧಿಗಳ ತೀಟೆಗೆ ಬಲಿಯಾಗಬಾರದು ಮತ್ತು ಅಭ್ಯರ್ಥಿಯ ಮೇಲಿನ ಕೋಪಕ್ಕೆ ಮೋದಿಯನ್ನು ಬಲಿಪಡೆದುಕೊಳ್ಳಬೇಡಿ.!
ಕೇಂದ್ರದಲ್ಲಿ ನರೇಂದ್ರ ಮೋದಿ ಇರುವವರೆಗೂ ನಮ್ಮ ದೇಶಕ್ಕೆ ಯಾವುದೇ ಅಪಾಯವಿಲ್ಲ ಮತ್ತು ಅಪಾಯ ಮಾಡುವ ಶಕ್ತಿಯನ್ನು ನಿರ್ನಾಮ ಮಾಡುವ ಸಾಮಾರ್ಥ್ಯ ಕೂಡ ಮೋದಿಗೆ ಇದೆ ಎಂಬುದನ್ನು ಈಗಾಗಲೇ ಪ್ರಧಾನಿ ಮೋದಿ ಸಾಬೀತು ಪಡಿಸಿದ್ದಾರೆ. ದೇಶದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಮೋದಿಯವರನ್ನು ಸೋಲಿಸಲು ಮಹಾಘಟಬಂಧನ ನಿರ್ಮಾಣವಾಗಿದೆ. ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ಮರು ಆಯ್ಕೆ ಆಗಬಾರದು ಎಂಬ ನಿಟ್ಟಿನಲ್ಲಿ ಒಂದಾದ ವಿಪಕ್ಷಗಳು ಮೋದಿಯನ್ನು ನೇರವಾಗಿ ಎದುರಿಸಲಾಗದೆ ಇದೀಗ ಕಳ್ಳ ಮಾರ್ಗ ಹಿಡಿದು ತಮ್ಮ ಪ್ರಯತ್ನ ಸಾಧಿಸಲು ಹೊರಟಿದ್ದಾರೆ. ಅದೇನೆಂದರೆ ಪ್ರತೀ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯ ವಿರುದ್ಧ ಜನರಿಗೆ ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸಿ ಆ ನಂತರದಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡ ವಿಪಕ್ಷಗಳು ಈಗಾಗಲೇ ತಮ್ಮ ಕೆಲಸ ಆರಂಭಿಸಿವೆ.!
ನಿಮ್ಮ ಜಿಲ್ಲೆಯ ಅಭ್ಯರ್ಥಿಯನ್ನು ಸೋಲಿಸಿದರೆ ಕೇಂದ್ರದಲ್ಲಿ ಮೋದಿ ಸೋಲುತ್ತಾರೆ!
ಇದು ಮೋದಿ ವಿರೋಧಿಗಳು ಈಗಾಗಲೇ ಮಾಡಿಕೊಂಡ ಲೆಕ್ಕಾಚಾರ, ಯಾಕೆಂದರೆ ಈಗಾಗಲೇ ನಡೆದ ಎಲ್ಲಾ ಸಮೀಕ್ಷೆಯಲ್ಲೂ ಮೋದಿ ದಿಗ್ವಿಜಯ ಬಾರಿಸಿದ್ದಾರೆ. ಈಗಲೇ ಚುನಾವಣೆ ನಡೆದರೂ ಕೂಡ ಮೋದಿ ಬಹುಮತದಿಂದ ಮತ್ತೊಮ್ಮೆ ಆಯ್ಕೆಯಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ ಎಂದರೂ ತಪ್ಪಾಗದು. ಅದೇ ಕಾರಣಕ್ಕೆ ಒಂದು ಜಿಲ್ಲೆಯ ಬಿಜೆಪಿ ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪಣತೊಟ್ಟಿರುವ ವಿರೋಧಿಗಳು ಬಿಜೆಪಿ ಅಭ್ಯರ್ಥಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಮತ್ತು ಆತನ ಬಗ್ಗೆ ಕೀಳಾಗಿ ಮಾತನಾಡುತ್ತಾ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಕೆಲಸ ವಿಪಕ್ಷಗಳು ಆತಂಭಿಸಿವೆ. ಒಬ್ಬ ಸಂಸದ ಸೋತರೆ ಅದು ಕೇವಲ ಆತನ ಸೋಲಲ್ಲ, ಬದಲಾಗಿ ಅದು ಮೋದಿಯ ಸೋಲು.
ಯಾಕೆ ಗೊತ್ತಾ:?
2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕೂಡ ಸೋತಿದ್ದು ಇದೇ ಕಾರಣದಿಂದ. ಇಡೀ ದೇಶವೇ ವಾಜಪೇಯಿ ಸರಕಾರದ ಪರವಾಗಿ ನಿಂತಿತ್ತು, ಈ ಬಾರಿ ವಾಜಪೇಯಿ ಮತ್ತೊಮ್ಮೆ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು ಮತ್ತು ಅಷ್ಟೊಂದು ಗಾಢವಾಗಿ ಪ್ರಚಾರ ಕಾರ್ಯಕ್ಕೆ ಯಾರೂ ಹೋಗಿರಲಿಲ್ಲ. ಅದೇ ನೋಡಿ ನಾವು ಮಾಡಿದ ಬಹು ದೊಡ್ಡ ತಪ್ಪು, ನಾವು ಅಂದುಕೊಂಡ ಲೆಕ್ಕಾಚಾರ ತಲೆಕೆಳಗಾಗಿತ್ತು. ವಿಪಕ್ಷಗಳು ಮಾಡಿದ ಎಲ್ಲಾ ತಂತ್ರವೂ ಫಲ ನೀಡಿತ್ತು ಮತ್ತು ಅಟಲ್ ಜೀ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಆ ನಂತರದಲ್ಲಿ ನಮ್ಮ ದೇಶದಲ್ಲಿ ಏನು ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತದೇ ಕಾಂಗ್ರೆಸ್ ಆಳ್ವಿಕೆಗೆ ಬಂತು, ನಮ್ಮ ದೇಶದ ಸ್ಥಿತಿ ಪಾತಾಳಕ್ಕೆ ಕುಸಿಯುವಂತಾಯಿತು. ಆದರೆ ಅಂದು ಮಾಡಿದ ತಪ್ಪು ಈ ಬಾರಿ ಮಾಡಬಾರದು, ಯಾಕೆಂದರೆ ಈ ಬಾರಿ ನಾವು ಸ್ವಲ್ಪ ಎಡವಿದರೂ ಮತ್ತೆಂದೂ ಮೇಲೇಳಲು ಸಾಧ್ಯವಿಲ್ಲ.
ನರೇಂದ್ರ ಮೋದಿಯಂತಹ ನಾಯಕ ಸಿಗಬೇಕಾದರೆ ಮತ್ತೆ ೫೦ ವರ್ಷ ಕಾಯಬೇಕಾದ ಸ್ಥಿತಿ ಬರಬಹುದು. ಅಷ್ಟರಲ್ಲಿ ಈ ದೇಶದ ಸ್ಥಿತಿ ಯಾರೂ ಊಹಿಸಿದ ಸ್ಥಿತಿಗೆ ಬಂದು ನಿಂತಿರುತ್ತದೆ. ಚುನಾವಣೆ ನಮ್ಮ ಕಣ್ಣ ಮುಂದೆ ಇದೆ, ಆದಷ್ಟು ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡೋಣ. ಯಾಕೆಂದರೆ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಭಾರತಕ್ಕಾಗಿ ಭಾರತೀಯರಿಗಾಗಿ ದುಡಿಯುವ ನರೇಂದ್ರ ಮೋದಿಜೀಯ ಜೊತೆಗೆ ಈಗ ನಾವು ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದೆ. ಅದೇನೇ ಇರಲಿ ನಿಮ್ಮ ಕ್ಷೇತ್ರದ ಸಂಸದನ ಮೇಲಿನ ಕೋಪಕ್ಕೆ ನರೇಂದ್ರ ಮೋದಿಜೀಯನ್ನು ಸೋಲಿಸಬೇಡಿ, ಯಾಕೆಂದರೆ ಇತ್ತ ಒಬ್ಬ ಸಂಸದ ಸೋತರೆ ಅತ್ತ ಮೋದಿಯ ಗೆಲುವು ಕೂಡ ಕಷ್ಟ ಎಂಬುದು ಪ್ರತಿಯೊಬ್ಬ ಕಾರ್ಯಕರ್ತನಿಗೂ ನೆನಪಿರಲಿ..!
-ಪಿ ಆರ್ ಶೆಟ್ಟಿ..ಪೋಸ್ಟ್ ಕಾರ್ಡ್ ನ್ಯೂಸ್
Comments