ಬಿಗ್ ಬ್ರೇಕಿಂಗ್: ಜೆಡಿಎಸ್ ಪಕ್ಷ ತೊರೆದ ದೇವೆಗೌಡರ ಪರಮಾಪ್ತ..!!

16 Mar 2019 1:26 PM |
7987 Report

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಮೇಲೆ ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಲಸ ಮಾಡುತ್ತಿದ್ದಾರೆ.ಇತ್ತಿಗಷ್ಟೆ ದೋಸ್ತಿ ಸರ್ಕಾರದ ನಾಯಕರು ರಾಜೀನಮೆ ನೀಡುತ್ತಿದ್ದಾರೆ. ಇದರ ಬೆನ್ನಲೆ ಇದೀಗ ರಾಜ್ಯದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸದಸ್ಯರಾಗಿದ್ದ ಜೆಡಿಎಸ್‍ನ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡ್ಯಾನಿಷ್ ಆಲಿ ಇಂದು ಬಿಎಸ್‍ಪಿ ಸೇರ್ಪಡೆಯಾಗಿದ್ದಾರೆ.

ಲಕ್ನೋದಲ್ಲಿರುವ ಬಿಎಸ್‍ಪಿ ಕಚೇರಿಯಲ್ಲಿ ಡ್ಯಾನಿಷ್ ಆಲಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಉತ್ತರ ಪ್ರದೇಶದಲ್ಲಿ ದೊಡ್ಡಮಟ್ಟದ ಸಂಘಟನೆ ಹೊಂದಿಲ್ಲ. ಹೀಗಾಗಿ ನನ್ನ ದೊಡ್ಡ ಮಟ್ಟದ ಪರಿಶ್ರಮವೆಲ್ಲ ನನ್ನ ಜನ್ಮ ಭೂಮಿಯಲ್ಲಿ ನನಗೆ ಯಾವುದೇ ಫಲ ಸಿಗಲಿಲ್ಲ.. ನನ್ನ ಕರ್ಮಭೂಮಿಯಲ್ಲಿ ನಾನು ರಾಜಕೀಯ ನೆಲೆ ಕಂಡುಕೊಳ್ಳಬೇಕಿದೆ.

ಮುಂದಿನ ದಿನಗಳಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಲಿದ್ದು, ಅದನ್ನು ಎದುರಿಸಲು ಬಲವಾದ ನಾಯಕತ್ವದ ಅಗತ್ಯವಿದೆ. ನಾವೂ ಕೂಡ ಪ್ರಬಲವಾಗಿ ಬೆಳೆಯಬೇಕಿದೆ. ಹೀಗಾಗಿ ನಾವು ಬಿಎಸ್‍ಪಿ ಸೇರುತ್ತಿರುವುದಾಗಿ ಡ್ಯಾನಿಷ್ ಅಲಿ ಘೋಷಿಸಿದ್ದಾರೆ.. ಒಟ್ಟಾರೆಯಾಗಿ ದೋಸ್ತಿ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದಂತಾಗುತ್ತಿದೆ..

Edited By

hdk fans

Reported By

hdk fans

Comments