ಮಂಡ್ಯದ ಅಳಿಯ ಆಗ್ತಾರಾ ನಿಖಿಲ್ ಕುಮಾರಸ್ವಾಮಿ..? ಶಾಕಿಂಗ್ ಹೇಳಿಕೆ ಕೊಟ್ಟ ಜೆಡಿಎಸ್ ನಾಯಕ..!!!
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ.ಇದೇ ವೇಳೆ ನಿಖಿಲ್ ಬಗ್ಗೆ ನಾಗಮಂಗನ ಶಾಸಕ ಹೇಳಿದ ಮಾತೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆನ್ನೆಯಷ್ಟೆ ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ನಡೆದಿದೆ ನೆನ್ನೆ ನಡೆದ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಯಿತು. .. ಸುಮಲತಾ ಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಇಂದು ಎಸ್ ಎಂ ಕೃಷ್ಣ ಮನೆಗೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು..
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸುರೇಶ್ ಗೌಡ ಯಾರು ಏನೇ ಟೀಕೆ ಮಾಡಿದರೂ ಕೂಡ ಅದನ್ನೆಲ್ಲಾ ನಾವು ಸಂತೋಷವಾಗಿ ಸ್ವೀಕರಿಸುತ್ತೇವೆ.. ಹಾಗೂ ಅದಕ್ಕೆ ನಾವು ಚುನಾವಣೆಯಲ್ಲಿಯೇ ತಕ್ಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು. ನಿಖಿಲ್ ಬೇರೆ ಯಾರು ಅಲ್ಲ… ನಮ್ಮ ಮನೆಯ ಮಗ ಇದ್ದಾಗೆ…. ನಾಳೆ ಅಳಿಯ ಆದರೂ ಆಗಬಹುದು ಎಂದು ತಿಳಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಿಖಿಲ್ ಮಂಡ್ಯದ ಹೆಣ್ಣನ್ನ ಮದುವೆಯಾಗುತ್ತಾರೆ ಎಂದು ಸುರೇಶ್ ಗೌಡ ಹೇಳಿದ್ದು, ಮಂಡ್ಯ ಜಿಲ್ಲೆಯ ಜೆಡಿಎಸ್ ಕಟ್ಟಾಳುಗಳು ಯಾವ ರೀತಿ ಇದ್ದಾರೆ ಎಂಬುದನ್ನು ಮತ ನೀಡಿ ಪ್ರೂವ್ ಮಾಡಬೇಕಿದೆ ಎಂದು ಕರೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ರಾಜಕೀಯದಲ್ಲಿ ಗೆಲ್ಲಲ್ಲು ಏನು ಬೇಕಾದ್ರು ಮಾಡ್ತಾರೆ ಅನ್ನೋದಕ್ಕೆ ಕೆಲವೊಂದು ನಿದರ್ಶನಗಳು ಸಿಗುತ್ತವೆ.. ಒಟ್ಟಾರೆ ಮಂಡ್ಯದಲ್ಲಿ ಅಧಿಕೃತವಾಗಿ ನಿಖಿಲ್ ಹೆಸರು ಘೋಷಣೆ ಆಗಿದೆ.
Comments