ಬಿಗ್ ಬ್ರೇಕಿಂಗ್ : ರಾಜೀನಾಮೆ ಕೊಡ್ತಾರಂತೆ ಸಿಎಂ ಕುಮಾರಸ್ವಾಮಿ..!!?

14 Mar 2019 10:48 AM |
11172 Report

ಈಗಾಗಲೇ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಈ ಬಾರಿ ಚುನಾವಣೆಯ ಕಾವು ಹೆಚ್ಚಾಗಿಯೇ ಇದೆ.ಅದರಲ್ಲೂ ಮಂಡ್ಯ ಕ್ಷೇತ್ರ ಮಾತ್ರ ರಣರಂಗವಾಗುತ್ತಿದೆ.. ಅದ್ಯಾಕೋ ಗೊತ್ತಿಲ್ಲ ಮಂಡ್ಯ ಕ್ಷೇತ್ರವೇ ಬೇಕು ಅಂತ ಸುಮಲತಾ ಒಂದು ಕಡೆ.. ನಮಗೂ ಮಂಡ್ಯ ನೇ ಬೇಕು ಅಂತ ಜೆಡಿಎಸ್ ಪಕ್ಷ.. ಈ ಇಬ್ಬರಲ್ಲಿ ನಿಖಿಲ್ ಗೆ ಟಿಕೆಟ್ ಎಂಬುದು ಬಹುತೇಕ ಖಚಿತವಾಗಿದೆ.. ಹಾಗಾಗಿ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸುವುದು ಪಕ್ಕಾ..!! 

ಈ ಚರ್ಚೆ ನಡೆಯುತ್ತಿರುವಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.. ಏನಪ್ಪಾ ಅಂತೀರಾ.. ಲೋಕಸಭೆ ಚುನಾವಣೆಯ ಬಳಿಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಒತ್ತಡದ ರಾಜಿಯಾಗಿದೆ. ಬೇರೆ ರಾಜ್ಯಗಳಲ್ಲಿ ಎನ್ ಡಿಎ ಮೈತ್ರಿಕೂಟ ಮಿತ್ರ ಪಕ್ಷಗಳೊಂದಿಗೆ ಈಗಾಗಲೇ ಸೀಟು ಹಂಚಿಕೆ ಮುಗಿಸಿದೆ. ಆದರೆ, ರಾಜ್ಯದಲ್ಲಿ ದಿನಬೆಳಗಾದರೆ ಚರ್ಚೆಗಳು ನಡೆಯುತ್ತಿರುವುದರಿಂದ ಜನ ಬೆಸತ್ತು ಹೋಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು.

ಜನತಾ ಪರಿವಾರ ಯಾವಾಗಲೂ ಕಾಂಗ್ರೆಸ್ ಗೆ ವಿರುದ್ಧವಾಗಿದೆ. ಸಿಎಂ ಕುಮಾರಸ್ವಾಮಿ ಅವರು ನಮ್ಮ ಜೊತೆ ಬಂದಿದ್ದರೆ ಇಷ್ಟು ತೊಂದರೆ ಅನುಭವಿಸುತ್ತಿರಲಿಲ್ಲ. ಈ ಕುರಿತು ಮುಂದಾಲೋಚನೆ ಮಾಡಬೇಕಿತ್ತು ಎಂದರು. ಒಟ್ಟಾರೆ ಒಳಗೊಳಗೆ ನಡೆಯುತ್ತಿದ್ದ ಮೈತ್ರಿ ಪಕ್ಷದ ಕಿತ್ತಾಟಗಳು ಇದೀಗ ಬಹಿರಂಗವಾಗಿಯೇ ಆಗುತ್ತಿರುವುದರಿಂದ ವಿರೋಧ ಪಕ್ಷಗಳಿಗೆ ಅನುಕೂಲವಾದಂತೆ ಆಗುತ್ತಿದೆ..

Edited By

hdk fans

Reported By

hdk fans

Comments