ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ..!?
ಈಗಾಗಲೇ ಲೋಕಸಭಾ ಚುನಾವಣೆಯ ದಿನಾಂಕ ನಿಗಧಿಯಾಗಿದೆ.. ಇದರ ಬೆನ್ನಲ್ಲೆ ಎಲ್ಲರೂ ಕೂಡ ಅಭ್ಯರ್ಥಿಯ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ… ದೋಸ್ತಿ ಸರ್ಕಾರಕ್ಕೆ ಈ ವಿಷಯವಾಗಿ ದೊಡ್ಡ ತಲೆ ನೋವೆ ಉಂಟಾದಂತೆ ಆಗಿದೆ.. ಕಾಂಗ್ರೆಸ್ ಎಷ್ಟು ಕ್ಷೇತ್ರಗಳು ಜೆಡಿಎಸ್ ಗೆ ಎಷ್ಟು ಕ್ಷೇತ್ರಗಳು ಎಂಬ ಗೊಂದಲವೇ ಇನ್ನೂ ಬಗೆ ಹರಿದಿಲ್ಲ… ಆದರೆ ಮೈತ್ರಿ ಸರಕಾರದ ಪಕ್ಷವಾಗಿರುವ ಜೆಡಿಎಸ್ ಲೋಕಸಭೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ರಾತ್ರಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೀಟು ಹಂಚಿಕೆಗಾಗಿ ಕಾಂಗ್ರೆಸ್ ಜೊತೆ ಜೆಡಿಎಸ್ ನ ಪೈಪೋಟಿ ಮುಂದುವರೆದಿದೆ. ಇತ್ತ ಜೆಡಿಎಸ್ ಮಹತ್ವದ ಸಭೆ ಕರೆದಿದ್ದು, ಸಭೆ ಬಳಿಕ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಬಹುದು ಎನ್ನಲಾಗಿದೆ. ಇದೀಗ ಜೆಡಿಎಸ್ ಪಕ್ಷವು ಮೈಸೂರು ಹಾಗೂ ತುಮಕೂರು ಕ್ಷೇತ್ರಗಳಿಗೆ ಪಟ್ಟು ಹಿಡಿದಿದೆ ಎನ್ನಬಹುದಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾದಂತೆ ಆಗಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ 7 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ ನ ಸಭೆಯಲ್ಲಿ ದೇವೇಗೌಡ್ರು, ಕುಮಾರಸ್ವಾಮಿ, ಹೆಚ್.ವಿಶ್ವನಾಥ್, ವೈ.ಎಸ್.ವಿ.ದತ್ತಾ ಸೇರಿದಂತೆ ಕೆಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments