ಜೆಡಿಎಸ್ ಪಕ್ಷಕ್ಕೆ ಕೈ ಕೊಡಲಿದ್ದಾರೆ ಈ ಮಾಜಿ ಸಚಿವ..!!?
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಹಿನ್ನಲೆಯಲ್ಲಿ ದೋಸ್ತಿ ಸರ್ಕಾರದ ಅನೇಕ ಅತೃಪ್ತ ಶಾಸಕರು ತಮ್ಮ ತಮ್ಮ ಪಕ್ಷವನ್ನು ಬಿಡಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.. ಇದೀಗ ಮಾಜಿ ಸಚಿವ ಕೊಡಗು ಜಿಲ್ಲಾ ಜೆಡಿಎಸ್ ನಾಯಕ ಬಿ ಎ ಜೀವಿಜಯ ಅವರು ಇದೀಗ ಪಕ್ಷ ಬಿಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಹಿನ್ನಡೆ ಉಂಟಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿ ಎ ಜೀವಿಜಯ ಅವರು ಪಕ್ಷದ ನಾಯಕರ ವಿರುದ್ದ ಅಸಮಾಧಾನಗೊಂಡಿರುವ ಹಿನ್ನಲೆಯಲ್ಲಿ ಇನ್ನೆರಡು ದಿನದಲ್ಲಿ ಬೆಂಬಲಿಗರೊಂದಿಗೆ ಬೆಂಗಳೂರಿಗೆ ಬಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ಕೆ.ಎಂ.ಬಿ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ.. ಇದರಿಂದ ಬೇಸರಗೊಂಡ ಮಾಜಿ ಸಚಿವ ಕೊಡಗು ಜಿಲ್ಲಾ ಜೆಡಿಎಸ್ ನಾಯಕ ಬಿ ಎ ಜೀವಿಜಯ ಅವರು ಅಸಮಾಧಾನಗೊಂಡಿದ್ದಾರೆ.. ಇದರಿಂದ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.. ಇದರಿಂದ ದೋಸ್ತಿ ಸರ್ಕಾರಕ್ಕೆ ಶಾಕ್ ಆದಂತೆ ಆಗಿದೆ..
Comments