ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಲೋಕಸಭಾ ಅಖಾಡ ಫಿಕ್ಸ್..!? ಯಾವ ಕ್ಷೇತ್ರ ಗೊತ್ತಾ..?
ಮಂಡ್ಯ ಅಖಾಡ ಈಗಾಗಲೇ ಸಿಕ್ಕಾಪಟ್ಟೆ ಸುದ್ದಿಯಾಗಿರುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.. ಮಂಡ್ಯದ ಜನತೆಯ ಒಲವು ಸುಮಲತ ಕಡೆಗೂ ಅಥವಾ ನಿಖಿಲ್ ಪರವೋ ಎಂಬುದು ಗೊತ್ತಿಲ್ಲ…ಆದರೆ ಮೈಸೂರಿನಲ್ಲಿ ಯಾಔ ಅಭ್ಯರ್ಥಿ ನಿಲ್ಲುತ್ತಾರೋ ಗೊತ್ತಿಲ್ಲ… ಆದರೆ ಇದೀಗ ಮೈಸೂರಿನಿಂದ ಬಲಿಷ್ಟ ಹೆಸರೊಂದು ಕೇಳಿ ಬರುತ್ತಿದೆ. ಮೈಸೂರಿನಲ್ಲಿ ಈ ಬಾರಿ ಕಾಂಗ್ರೆಸ್ಸಿನಿಂದ ಅಭ್ಯರ್ಥಿ ಯಾಗಿ ಅಥಾವ ಜೆಡಿಎಸ್‍ನಿಂದ ಇಳಿಯುತ್ತಾರೋ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಈ ನಡುವೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮೈಸೂರಿನಿಂದ ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮಾಜಿ ಸಿಎಂಸಿದ್ದರಾಮಯ್ಯ ನಾನು ಯಾವುದೇ ಕಾರಣಕ್ಕೂ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲ್ಲ. ಅನಿವಾರ್ಯ ಬಂದರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಕೇಂದ್ರ ನಾಯಕರ ಒತ್ತಾಯದ ಮೇರೆಗೆ ಮೈಸೂರನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.. ಮೊನ್ನೆ ಮೊನ್ನೆಯಷ್ಟೆ ಕುಮಾರಸ್ವಾಮಿ ನೇತೃತ್ವದ ಸಭೆಯಲ್ಲಿ ಮೈಸೂರನ್ನು ಸುಮಲತಾಗೆ ಬಿಟ್ಟು ಕೊಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವು.. ಆದರೆ ಇದೀಗ ದೇವೆಗೌಡರು ಅಖಾಡಕ್ಕೆ ಇಳಿಯುವ ಮಾತುಗಳು ಕೇಳಿ ಬರುತ್ತಿವೆ
Comments