ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ದೂರು ದಾಖಲು..!?
ರಾಜ್ಯ ರಾಜಕಾರಣದಲ್ಲಿ ಒಬ್ಬರನ್ನೊಬ್ಬರನ್ನು ಟೀಕಿಸುವುದು ಕಾಮನ್.. ಮಾತಿನ ಭರದಲ್ಲಿ ಯಾರು ಯಾರನ್ನು ಟೀಕಿಸುತ್ತಾರೋ ಗೊತ್ತಾಗುವುದಿಲ್ಲ… ಇದೀಗ ಮಂಡ್ಯ ಲೋಕಸಭಾ ಅಖಾಡ ರಣರಂಗವಾಗಿದ್ದು ಇದೀಗ ಪೊಲೀಸ್ ಮೆಟ್ಟಿಲೇರಿದ್ದಾರೆ ಎನ್ನಲಾಗುತ್ತಿದೆ..
ಮಂಡ್ಯದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ ಅವರ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಮಂಡ್ಯದ ಬಿಜೆಪಿ ಮುಖಂಡರೊಬ್ಬರು ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದಾರೆ. ಬಿಜೆಪಿ ಮುಖಂಡರಾದ ಸಿಟಿ ಮಂಜುನಾಥ್ ಮಂಡ್ಯ ಜಿಲ್ಲಾಧಿಕಾರಿ ಮುಖಾಂತರ ಮಹಿಳಾ ಆಯೋಗಕ್ಕೆ ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದಾರೆ. ಗಂಡ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಆಗಲೇ ರಾಜಕೀಯಕ್ಕೆ ಬರಬೇಕಾಗಿತ್ತಾ ಎಂದು ಸುಮಲತಾ ಅಂಬರೀಶ್ ವಿರುದ್ಧ ಸಚಿವ ರೇವಣ್ಣ ಕೀಳುಮಟ್ಟದ ಪದ ಬಳಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಮಹಿಳಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಹೇಳಿಕೆಯನ್ನು ಕೇಳಿ ಮಂಡ್ಯ ಜನತೆ ರೇವಣ್ಣ ವಿರುದ್ದ ಕೆಂಡಾಮಂಡಲವಾಗಿದ್ದಾರೆ. ಅಂಬಿ ಅಭಿಮಾನಿಗಳೂ ಕೂಡ ಈ ಹೇಳಿಕೆಯ ವಿರುದ್ದ ತಿರುಗಿ ಬಿದ್ದಿದ್ದಾರೆ.
Comments