ಮಂಡ್ಯದಲ್ಲಿ ನಿಖಿಲ್ ಸ್ಪರ್ಧಿಸುತ್ತಿರುವುದರ ಹಿಂದಿನ ರಹಸ್ಯ ರಿವಿಲ್..!!

ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.. ಇದೇ ಹಿನ್ನಲೆಯಲ್ಲಿ ಮಂಡ್ಯ ಅಖಾಡ ರಣರಂಗವಾಗಿದೆ… ಮತದಾರರ ಒಲವು ನಿಖಿಲ್ ಪರವೋ ಅಥವಾ ಸುಮಲತಾ ಪರವೋ ಗೊತ್ತಾಗುತ್ತಿಲ್ಲ..ಇದರ ಹಿನ್ನಲೆಯಲ್ಲಿಯೇ ಇದೀಗ ನಿಖಿಲ್ ಅಖಾಡಕ್ಕೆ ಇಳಿಯುವುದರ ರಹಸ್ಯ ಬಯಲಾಗಿದೆ ಎನ್ನಲಾಗುತ್ತಿದೆ.. ದೇವೆಗೌಡರ ಕುಟುಂಬದ ಬಹುತೇಕ ಮಂದಿ ರಾಜಕೀಯದಲ್ಲಿ ಇದ್ದಾರೆ.. ಮೊಮ್ಮಕ್ಕಳನ್ನು ಕೂಡ ರಾಜಕೀಯ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.
ಮಂಡ್ಯ ಅಖಾಡದಲ್ಲಿ ತೊಡೆ ತಟ್ಟಿ ನಿಂತಿರುವ ನಿಖಿಲ್ ಕುಮಾರಸ್ವಾಮಿಯನ್ನು ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕೆ ಇಳಿಸಿದ್ದಾರೆ.. ಆದರೆ ಅದಕ್ಕೂ ಮೊದಲೂ ಜ್ಯೋತಿಷಿಗಳ ಮಾತು ಕೇಳಿ ನಿಖಿಲ್ ರಾಜಕೀಯ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.. ನಿಖಿಲ್ ಅಸಲಿಗೆ ರಾಜಕೀಯಕ್ಕೆ ಎಂಟ್ರಿಯಾಗುವ ಟೈಂ ಇದಲ್ಲ ಎನ್ನುವುದು ಗೌಡರ ಕುಟುಂಬದ ಆಪ್ತ ಜ್ಯೋತಿಷಿ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ..
ಆದರೆ ನಿಖಿಲ್‍ಗೆ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಪೂಜಾಫಲದ ಕೃಪಾಕಟಾಕ್ಷ ಸಿಗಲಿದೆ. ಇದೇ ನಿಖಿಲ್ ಅವರನ್ನು ಕಾಪಾಡುತ್ತದೆ ಎಂದು ನಿಖಿಲ್ ಎಂಟ್ರಿಯನ್ನು ಒಪ್ಪಿಕೊಂಡಿದ್ದಾರೆ.. ದೇವೆಗೌಡರ ಕುಟುಂಬದವರು ಪೂಜೆ ಹೋಮ ಹವನ ಇತ್ಯಾದಿಗಳಲ್ಲಿ ಹೆಚ್ಚು ನಂಬಿಕೆಯನ್ನು ಇಡುತ್ತಾರೆ.. ಇದೇ ಹಿನ್ನಲೆಯಲ್ಲಿ ನಿಖಿಲ್ ಅವರನ್ನು ಕೂಡ ಕಣಕ್ಕೆ ಇಳಿಸಬೇಕು ಎಂಬುದು ದೇವೆಗೌಡರ ಕುಟುಂಬದ ಆಶಯ.
Comments