ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲು: ಕಾರಣ ಏನ್ ಗೊತ್ತಾ..?

ಪುಲ್ವಾಮ ದಾಳಿಯ ನಂತರ ಭಾರತದಲ್ಲಿ ಒಂದು ರೀತಿಯ ಪರಿಸ್ಥಿತಿ ಉಂಟಾಗಿ ಬಿಟ್ಟಿದೆ..ಪುಲ್ವಾಮ ದಾಳಿಯ ಪ್ರತ್ಯುತ್ತರಕ್ಕೆ ಸುಮಾರು 300 ಉಗ್ರರನ್ನು ಸದೆ ಬಡಿದರು ನಮ್ಮ ಭಾರತೀಯ ಯೋಧರು… ಈ ದಾಳಿಯಲ್ಲೂ ಕೂಡ ಕೆಲವು ರಾಜಕೀಯ ಗಣ್ಯರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಿಎಂ ಕುಮಾರಸ್ವಾಮಿ ವಿರುದ್ದ ದೂರು ದಾಖಲಾಗಿದೆ ಎನ್ನಲಾಗುತ್ತಿದೆ…
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎನ್ ಸಿ ಆರ್ ಅಂದರೆ ಗಂಭೀರ ಸ್ವರೂಪವಲ್ಲದ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಉಗ್ರರ ಹತ್ಯೆಯಾದಾಗ ಸಂಭ್ರಮಿಸುವುದು ಸರಿಯಲ್ಲಾ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ವಿರುದ್ಧ ಎನ್ ಸಿ ಆರ್ ದಾಖಲಾಗಿದೆ. ಅನಿಲ್ ಕುಮಾರ್ ಸಭರ್ ವಾಲ್ ಎಂಬುವವರು ಈ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ… ಸಿಎಂ ಹೇಳಿಕೆಯಿಂದ ದೇಶಭಕ್ತಿಗೆ ಧಕ್ಕೆ ತಂದಿದೆ. ಸಿಎಂ ಭಯೋತ್ಪಾದ ಕೃತ್ಯಕ್ಕೆ ಹಾಗೂ ಭಯೋತ್ಪಾದಕರಿಗೆ ಸಹಕಾರ ನೀಡ್ತಿದ್ದಾರೆ, ಈ ಕೂಡಲೇ ಮುಖ್ಯಮಂತ್ರಿಯವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಪ್ರತಿ ಪಕ್ಷಗಳ ಕುತಂತ್ರಕ್ಕೆ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೆ ಸಾಕ್ಷಿ..
Comments