ಸಿಎಂ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ ಜೆಡಿಎಸ್ ಶಾಸಕ..!!
ಇತ್ತಿಚಿಗಷ್ಟೆ ಸಿಎಂ ಕುಮಾರಸ್ವಾಮಿ ಮಂಡ್ಯ ಜನತೆಗೆ ಅಂಬರೀಶ್ ಕೆಲಸ ಮಾಡಿಲ್ಲ ಎಂಬ ಹೇಳಿಕೆಯನ್ನು ನೀಡಿದರು…ಯಾವುದೋ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಅಂಬರೀಶ್ ಕೆಲಸ ಮಾಡಿಲ್ಲ ಎಂದಿರಬಹುದು…ಆದರೆ ಬೇಕು ಬೇಕು ಅಂತ ಕುಮಾರಸ್ವಾಮಿಯವರು ಈ ರೀತಿ ಮಾತಾಡಿಲ್ಲ..ದೇವೆಗೌಡರು, ಕುಮಾರಸ್ವಾಮಿಯವರು ಅಂಬರೀಶ್ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ ಎಂದು ಮಾಜಿ ಶಾಸಕ ಎನ್ ಚಲುವರಾಯ ಸ್ವಾಮಿ ಹೇಳಿದರು..
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯ ಸ್ವಾಮಿಯವರು ಅಂಬರೀಷ್ ಅವರ ಬಗೆಗೆ ಗೌರವ ಇಟ್ಟುಕೊಂಡು ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಟಿಕೆಟ್ ಕೊಡಬಹುದು ಎಂದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರಾ ಎಂಬ ಮಾತು ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿಯೇ ಮೈತ್ರಿಯಾಗಿ ಕಾಂಗ್ರೆಸ್ ನಿಂದ ಬೇಡ ಜೆಡಿಎಸ್ ನಿಂದಲೇ ಸ್ಪರ್ಧಿಸಲಿ ಎಂದು ಸುಮಲತಾ ಅಂಬರೀಶ್ ಗೆ ಟಿಕೆಟ್ ನೀಡಬಹುದು ಎಂದು ಹೇಳಿದ್ದಾರೆ..
Comments