ಲೋಕಸಭಾ ಚುನಾವಣೆಯ ಮೈಸೂರು ಅಖಾಡಕ್ಕೆ ಜೆಡಿಎಸ್ ಅಭ್ಯರ್ಥಿ ಫಿಕ್ಸ್..!?
ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಭರ್ಜರಿಯಾಗಿಯೇ ನಡೆಯುತ್ತಿದೆ.. ಮಂಡ್ಯ ಜಿಲ್ಲೆಯು ಸಿಕ್ಕಾಪಟ್ಟೆ ರಂಗೇರಿತ್ತು.. ಮಂಡ್ಯದಿಂದ ಯಾರು ಅಖಾಡಕ್ಕೆ ಇಳಿಯುತ್ತಾರೆ ಎಂಬುದು ಚರ್ಚೆಯ ವಿಷಯವಾಗಿತ್ತು.. ನಿಖಿಲ್ ಮಂಡ್ಯದಿಂದ ಸ್ಪರ್ಧಿಸುವುದಾಗಿ ಹೇಳಲಾಗುತ್ತಿತ್ತು… ಆದರೆ ಇದೀಗ ನಿಖಿಲ್ ಮಂಡ್ಯದಿಂದ ದೂರ ಸರಿದಿದ್ದಾರೆ ಎನ್ನಮಾಗುತ್ತಿದೆ..
ಲೋಕಸಭೆ ಚುನಾವಣೆಗೆ ಮೈಸೂರು ಕ್ಷೇತ್ರದಿಂದ ನಿಖಿಲ್ ಕುಮಾರ್ ಸ್ಪರ್ಧೆ ಮಾಡಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡರು, ಯಾವ ಜಾಗದಲ್ಲಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೀರೋ ಅಂತಾ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ಅವರು ಸಿನಿಮಾ ಹೀರೋ ಆಗಿದ್ದಾರೆ. ಜನ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರುವುದನ್ನು ಬಯಸುತ್ತಿದ್ದಾರೆ ಎಂದರು. ಒಂದು ನಿಖಿಲ್ ಸ್ಪರ್ಧಿಸುವುದಾದರೆ ಮೈಸೂರಿನಿಂದ ಸ್ಪರ್ಧಿಸಲಿ… ಅವರನ್ನು ಗೆಲ್ಲಿಸದುವ ಜವಬ್ದಾರಿ ನಮ್ಮದು ಎಂದಿದ್ದಾರೆ ಜಿಟಿ ದೇವೆಗೌಡರು.. ಈ ಬಗ್ಗೆ ಕುಮಾರಸ್ವಾಮಿಯವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments