ಅಂಬರೀಶ್ ಅವರನ್ನು ಟೀಕಿಸಿದ CM HDK..? ಕಾರಣ ಏನ್ ಗೊತ್ತಾ..?

ದಿವಂಗತ್ ಅಂಬರೀಶ್ ಇಂದು ನಮ್ಮೊಂದಿಲ್ಲ.. ಇರುವುದು ಕೇವಲ ಅವರ ನೆನಪು ಮಾತ್ರ ಅಂಬರೀಶ್ ಅವರು ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ಕೂಡ ನೀಡಿಲ್ಲ… ಅವರಿಂದ ಮಾಡಲಾಗದ ಅದೆಷ್ಟೋ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಹೆಚ್ ಡಿ ಕುಮಾರಸ್ವಾಮಿಯವರು ಅಂಬರೀಶ್ ವಿರುದ್ದ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮಾತನಾಡುವ ಸಮಯದಲ್ಲಿ ಅಂಬರೀಶ್ ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.. ಆದರೂ ಕೂಡ ಯಾವುದೇ ಅಭಿವೃದ್ಧೀ ಕೆಲಸಗಳನ್ನು ಮಾಡಿಲ್ಲ ಎಂದರು..
ಅಂಬರೀಶ್ ಹಾಗೂ ನನ್ನ ನಡುವೆ ಒಳ್ಳೆಯ ಬಾಂಧವ್ಯವಿತ್ತು, ಒಳ್ಳೆಯ ಸ್ನೇಹವಿತ್ತು, ಪಕ್ಷಗಳು ಬೇರೆ ಬೇರೆಯಾಗಿದ್ದರೂಕೂಡ ನಾವು ಒಗ್ಗಟ್ಟಾಗಿದ್ದೆವು.. ಆದರೆ ಅವರ ನಿಧನದ ಬಳಿಕ ಅಂಬರೀಶ್ ಕುಟುಂಬ ಹಾಗೂ ನಮ್ಮ ನಡುವೆ ಬಿರುಕು ಮೂಡಲು ಆರಂಭಿಸಿದೆ.. ಅವರ ನಿಧನಕ್ಕೆ ನಾನು ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಿದ್ದೇನೆ.. ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಮಡು ಹೋಗುವುದು ಬೇಡ ಎಂದವರು ಇದೀಗ ಜಿಲ್ಲೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.. ಲೋಕಸಭಾ ಚುನಾವಣೆಯೆ ವಿಚಾರವಾಗಿ ಅವರ ಕುಟುಂಬದಲ್ಲಿ ಇದೀಗ ಬಿರುಕು ಮೂಡಲು ಪ್ರಾರಂಭಿಸಿದೆ.
Comments