ಮಗ ನಿಖಿಲ್’ಗಾಗಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ..!! ಕಾರಣ ಏನ್ ಗೊತ್ತಾ..?

ತಮ್ಮ ತಮ್ಮ ಮಕ್ಕಳಿಗಾಗಿ ಪೋಷಕರು ಏನು ಬೇಕಾದರೂ ಮಾಡುತ್ತಾರೆ ಎಂಬುದು ಎಲ್ಲರಿಗೂ ಕೂಡ ಗೊತ್ತು.. ಮಕ್ಕಳಿಗಾಗಿ ಪೋಷಕರು ಹರಕೆಯನ್ನು ಹೊತ್ತಿಕೊಳ್ಳುವುದು ಕಾಮನ್.. ಇದೀಗ ಅನಿತಾ ಕುಮಾರಸ್ವಾಮಿ ಕೂಡ ತಮ್ಮ ಮಗ ನಿಖಿಲ್ ಆಗಿ ಹರಕೆಯನ್ನು ಹೊತ್ತಿಕೊಂಡಿದ್ದಾರೆ..
ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯಕ್ಕಾಗಿ ಮಂಡ್ಯ ಜಿಲ್ಲೆ, ಮದ್ದೂರು ಪಟ್ಟಣ ಹೊರವಲಯದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಅನಿತಾ ಕುಮಾರಸ್ವಾಮಿ ಅವರು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದರು.ನಿಖಿಲ್‍ಗೆ ಟಿಕೆಟ್ ಸಿಕ್ಕಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಅವರು ಪ್ರಾರ್ಥಿಸಿದರು. ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಒಂದುಕಾಲು ರೂಪಾಯಿ ಹರಕೆ ಹೊತ್ತರೆ ಇಷ್ಟಾರ್ಥ ನೆರವೇರಲಿದೆ ಎಂಬ ನಂಬಿಕೆ ಇದೆ. ಹಾಗಾಗಿ ಅನಿತಾ ಕುಮಾರಸ್ವಾಮಿ ಅವರು ಇಂದು ತಮ್ಮ ಪುತ್ರನಿಗಾಗಿ ಈ ಹರಕೆ ಸಲ್ಲಿಸಿದರು.ಮಗನಿಗೆ ರಾಜಕೀಯ ಭವಿಷ್ಯವನ್ನು ಕಟ್ಟಿಕೊಡುವುದಕ್ಕಾಗಿ ಅನಿತಾ ಕುಮಾರಸ್ವಾಮಿ ದೇವರ ಮೊರೆಯೋಗುತ್ತಿದ್ದಾರೆ.
Comments