ಶ್ರೀ ಹುಲುಕುಡಿ ವೀರಭದ್ರಸ್ವಾಮಿ 39 ನೇ ವಾರ್ಷಿಕ ಬ್ರಹ್ಮರಥೋತ್ಸವ
ದಿನಾಂಕ 12-2-2019 ಮಂಗಳವಾರ ರಥಸಪ್ತಮಿಯಂದು ಕನಕಪುರ ಸುಕ್ಷೇತ್ರ, ಶ್ರೀ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ.ಮ.ನಿ.ಪ್ರ.ಸ್ವ. ಚನ್ನಬಸವಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀ ಹುಲಿಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ಜಾತ್ರಾ ಮಹೋತ್ಸವ ಹಾಗೂ 39ನೇ ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನೆಡೆಯಿತು, ನೆರೆದಿದ್ದ ಭಕಾದಿಗಳು ದೇವರಿಗೆ ಹೂ ಹಣ್ಣು ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ನವರಿಗೆ ರುದ್ರಾಭಿಷೇಕ ಹಾಗೂ 10-30 ಕ್ಕೆ ರಥಾಂಗಹೋಮವನ್ನು ವೇದಬ್ರಹ್ಮ ಬಸವಾರಾಧ್ಯರು ನೆಡೆಸಿಕೊಟ್ಟರು, ಶಾಸಕ ಟಿ.ವೆಂಕಟರಮಣಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ತಾಲ್ಲೂಕಿನ ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
Comments