ಪವರ್ ಪ್ಯಾಕ್ ನಟಸಾರ್ವಭೌಮ
ನಟಸಾರ್ವಭೌಮ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ಪವನ್ ವಡೆಯರ್ ನಿರ್ದೇಶನದ ನಟಸಾರ್ವಭೌಮ ಇದೆ ಮೊದಲ ಬಾರಿಗೆ ಇಡೀ ಭಾರತದಲ್ಲಿ ಮೊದಲ ಬಾರಿಗೆ ಚಿತ್ರ ಬಿಡುಗಡೆಯ ದಿನ ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಬರೋಬ್ಬರಿ 24 ಘಂಟೆಗಳ ಕಾಲ ಅಭಿಮಾನಿಗಳಿಗಾಗಿ ಶೋ ಎರ್ಪಡಿಸಿರುವುದು. ನೆನ್ನೆ ರಾತ್ರಿಯೇ ನಟಸಾರ್ವಭೌಮನ ಆರ್ಭಟ ಸಾವಿರಾರು ಜನ ನೋಡಿದ್ದಾಗಿದೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮದ ಅದ್ದೂರಿತನ ಚಿತ್ರದ ಪ್ರತಿ ಫ್ರೇಮ್ ನಲ್ಲಿ ಎದ್ದು ಕಾಣುತ್ತದೆ, ಪವನ್ ವಡೆಯರ್ ಅಚ್ಚು ಕಟ್ಟಾಗಿ ನಟಸಾರ್ವಭೌಮ ಚಿತ್ರವನ್ನು ಅಭಿಮಾನಿಗಳಿಗೆ ನಿರಾಸೆ ಆಗದಂತೆ ಮಾಡಿದ್ದಾರೆ, ನಾಯಕಿಯರಾಗಿ ರಚಿತಾ ರಾಮ್ ಹಾಗು ಅನುಪಮಾ, ಖಳನಾಗಿ ರವಿ ಶಂಕರ್, ಸ್ನೇಹಿತನಾಗಿ ಚಿಕ್ಕಣ್ಣ ನಟಿಸಿದ್ದಾರೆ. ಮೈ ನವಿರೇಳಿಸುವ ಪೀಟರ್ ಹೇನ್ ರವರ ಆಕ್ಷನ್ ಸೀನ್ ಗಳು, ಡಿ.ಇಮ್ಮಾನ್ ಸಂಗೀತ ಮತ್ತು ನಾನ್ ಸ್ಟಾಪ್ ಕಾಮಿಡಿ ಚಿತ್ರದ ಪ್ಲಸ್ ಪಾಯಿಂಟ್, ಓಪನ್ ದ ಬಾಟಲ್ ಹಾಡು ನೃತ್ಯ ಈ ಚಿತ್ರದ ಹೈಲೈಟ್, ಪವರ್ ಸ್ಟಾರ್ ಪುನೀತ್ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ, ಕೊಲ್ಕೊತ್ತಾದ ಚಿತ್ರೀಕರಣ ಸುಂದರವಾಗಿದೆ, ಪಕ್ಕಾ ಪೈಸಾ ವಸೂಲ್ ಚಿತ್ರ ನಟಸಾರ್ವಭೌಮ.
Comments