ದೇವಾಂಗ ಸಂಘ ಚುನಾವಣೆಗೆ ದೊಡ್ಡಬಳ್ಳಾಪುರದಿಂದ ಆರ್.ನಾರಾಯಣಪ್ಪ [ಆರ್.ಎನ್.ಎಕ್ಸ್] ಸ್ಪರ್ಧೆ
ಇದೇ ತಿಂಗಳು ದಿನಾಂಕ 17-2-2019 ರ ಭಾನುವಾರದಂದು ನೆಡೆಯಲಿರುವ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ದೇವಾಂಗ ಸಂಘದ ಚುನಾವಣೆಗೆ ಈ ಬಾರಿ ದೊಡ್ಡಬಳ್ಳಾಪುರದಿಂದ ಅಭ್ಯರ್ಥಿಯಾಗಿ ಕೋಟಿಖಾನೆ ಆರ್.ನಾರಾಯಣಪ್ಪ [ಆರ್.ಎನ್.ಎಕ್ಸ್] ಸ್ಪರ್ಧಿಸಲಿದ್ದಾರೆ. ನಗರದಲ್ಲಿರುವ ಬಹುಸಂಖ್ಯಾತ ಜನಾಂಗಗಳಲ್ಲಿ ಒಂದಾದ ದೇವಾಂಗ ಜನಾಂಗದ ಹೆಮ್ಮೆಯ ದೇವಾಂಗ ಸಂಘದ ನಿರ್ದೇಶಕ ಸ್ಥಾನಕ್ಕೆ ತಮ್ಮ ಸ್ನೇಹಿತರು, ಬಂಧು ಮಿತ್ರರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಚುನಾವಣೆಯಲ್ಲಿ ಎರಡು ಪ್ರಮುಖ ತಂಡಗಳು ಸ್ಪರ್ಧಿಸುತ್ತಿದ್ದು, ಅದರಲ್ಲಿ ಎ.ವಿಜಯಕುಮಾರ್ ಮತ್ತು ಟಿ.ಟಿ.ಭಾಸ್ಕರ್ ತಂಡದೊಂದಿಗೆ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ನಗರದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಮಾಜಿ ಅಧ್ಯಕ್ಷ ಎಸ್.ಶಿವಾನಂದ್, ಖಜಾಂಚಿ ದೇ.ರಾ.ನರಸಿಂಹಮೂರ್ತಿ, ಟ್ರಸ್ಟೀಗಳಾದ ಕೆ.ಎಂ.ಕೃಷ್ಣಮೂರ್ತಿ, ಹೆಚ್.ಎಸ್.ಶಿವಶಂಕರ್, ದೇವಾಂಗ ಮಂಡಲಿ ನಿರ್ದೇಶಕಾರಾದ ಅಖಿಲೇಶ್, ನಟರಾಜ್, ಪ್ರಭಾಕರ್, ರಘು, ಮತ್ತು ಉಮಾಶಂಕರ್,ಮಹೇಶ್,ಸಚ್ಚಿ,ಮಣಿ, ಆರ್.ವೆಂಕಟೇಶ್, ಬಾಬು, ನಂಜುಂಡಪ್ಪ ರೊಂದಿಗೆ ತಂಡದ ಇನ್ನಿತರ ಸ್ಪರ್ಧಿಗಳು ಹಾಜರಿದ್ದರು.
Comments