ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೆರೆ ಹೂಳೆತ್ತಲು ಅಧಿಕಾರಿಗಳ ಅಡ್ಡಿ - ತಾಪಂಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಹೂಳು ತುಂಬಿದ ಕೆರೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಕೆರೆ ಹೂಳೆತ್ತಲು ಹಾಗೂ ಬೇಲಿ ತೆರವಿಗೆ ಮುಂದಾದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಗ್ರಾಪಂ ಅಧಿಕಾರಿಗಳು ಕಾಮಗಾರಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆಂದು ಆರೋಪಿಸಿ ಹೊಸಹಳ್ಳಿ ಗ್ರಾಮಸ್ಥರು ಸೋಮವಾರ ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ನಾರಾಯಣಕುಮಾರ್ ಅಂತರ್ ಜಲ ಕುಸಿತ,ಬರದ ಬೇಗೆಯಿಂದ ತತ್ತರಿಸುತ್ತಿರುವ ದೊಡ್ಡಬಳ್ಳಾಪುರ ತಾಲೂಕಿನ ಕೆರೆಗಳಿಗೆ ಎತ್ತಿನ ಹೊಳೆ ನೀರನ್ನು ಹರಿಸುವೆ ಎಂದು ವೀರಪ್ಪಮೊಯ್ಲಿ ಕಳೆದ 10 ವರ್ಷಗಳಿಂದ ಭರವಸೆ ನೀಡಿದರೆ ಅವರದೆ ಅಧಿಕಾರಿಗಳು ಸಾರ್ವಜನಿಕರ ಚೆಂದಾ ಎತ್ತಿ ಕೆರೆಯ ಹೂಳೆತ್ತಲು ಮುಂದಾದರೆ ಪ್ರಭಾವಿಗಳಿಗೆ ಗುತ್ತಿಗೆದಾರರಿಂದ ಬರಬಹುದಾದ ಕಮಿಷನ್ ಕೈತಪ್ಪುತ್ತದೆ ಎಂಬ ದುರಾಸೆಯಿಂದ ಗ್ರಾಪಂ ಅಧಿಕಾರಿಗಳಿಗೆ ಒತ್ತಡ ಹೇರಿ ಕೆರೆ ಹೂಳೆತ್ತದಂತೆ ಪೊಲೀಸ್ ಠಾಣೆಗೆ ದೂರನ್ನು ಕೊಡಿಸಿರುವುದು ಖಂಡನೀಯವೆಂದರು.
ಗ್ರಾಪಂ ಉಪಾಧ್ಯಕ್ಷ ಹೆಚ್.ಸಿ.ಕೃಷ್ಣಪ್ಪ ಮಾತನಾಡಿ ಹೊಸಹಳ್ಳಿ ಕೆರೆಯಂಗಳದಲ್ಲಿ ನಿರಂತರ ಮರಳು ಸಾಗಣೆ, ಅಮೂಲ್ಯವಾದ ಮರಗಳ ಮಾರಣಹೋಮ ನಡೆಸಿದಾಗ ಕ್ರಮಕೈಗೊಳ್ಳಲು ಮುಂದಾಗದ ಗ್ರಾಪಂ ಅಧಿಕಾರಿಗಳು ಪ್ರಭಾವಿ ಮುಖಂಡರ ಅಣತಿಯಂತೆ ಕುಣಿಯುತ್ತಾ ರೈತರ ಅನುಕೂಲಕ್ಕಾಗಿ ಕೆರೆಯಲ್ಲಿ ಹೂಳೆತ್ತಿದ್ದರೆ ಗ್ರಾಪಂ ಸದಸ್ಯರಿಗೆ ವಿಷಯವನ್ನೆ ತಿಳಿಸದೆ ಏಕಾಏಕಿ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದ ಗ್ರಾಮಸ್ಥರು ಅಧಿಕಾರಿಗಳನ್ನು ಕುಡಿಹಾಕಿ ಗ್ರಾಮಪಂಚಾಯಿತಿಗೆ ಭೀಗ ಹಾಕಲು ಮುಂದಾದರು.ಈ ವೇಳೆ ಮಧ್ಯಪ್ರವೇಶಿಸಿದ ಗ್ರಾಪಂ ಉಪಾಧ್ಯಕ್ಷ ಹೆಚ್.ಸಿ.ಕೃಷ್ಣಪ್ಪ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡದೆ ಕೆರೆಯ ಅಭಿವೃದ್ದಿ ವಿಚಾರದ ದಲ್ಲಿ ಪೂರ್ವಪರ ತಿಳಿಯದೆ ಪೊಲೀಸ್ ಠಾಣೆಗೆ ದೂರು ನೀಡಿದ ಕಾರ್ಯದರ್ಶಿಯನ್ನು ತರಾಟೆಗೆ ತಗೆದುಕೊಂಡು ತಾಪಂ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಧಿಕಾರಿಗೆ ಮಾಹಿತಿ ನೀಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಪಂ ಕರ್ಯನಿರ್ವಹಣಾಧಿಕಾರಿ ದ್ಯಾಮಪ್ಪ ಸ್ಥಳ ಪರಿಶೀಲನೆ ನಡೆಸಿದರು.ನಂತರ ಮಾತನಾಡಿ ಕೆರೆ ಹೂಳು ಹಾಗೂ ಬೇಲಿ ತೆರವು ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ನೀಡುವುದಾಗಿ ತಿಳಿಸಿದರು ಇದಕ್ಕೊಪ್ಪದ ಗ್ರಾಮಸ್ಥರು ಅಕ್ರಮವಾಗಿ ಮರಕಡಿಯುವಾಗ,ಮರಳುಗಾರಿಕೆ ಮಾಡುವಾಗ,ಮಧ್ಯಮಾರಾಟಕ್ಕಿರದ ಅನುಮತಿ ಗ್ರಾಮಕ್ಕೆ ಒಳ್ಳೆಯದಾಗಲೆಂದು ಕೆರೆ ಹೂಳೆತ್ತಲು,ತ್ಯಾಜ್ಯ ಬೇಲಿ ತೆರವು ಮಾಡಲು ಬೇಕೇ ಅನುಮತಿ ನೀಡಿ ಇಲ್ಲಿಂದ ತೆರಳಿ ಎಂದು ಪಟ್ಟು ಹಿಡಿದರು ಅಂತಿಮವಾಗಿ ಕೆರೆಯಲ್ಲಿನ ಮರಗಳಿಗೆ ಹಾನಿಯಾಗದಂತೆ ಬೆಲಿ ತೆರವುಗೊಳಿಸಲ ಪಿಡಿಒ ಕಡೆಯಿಂದ ಅನುಮತಿ ನೀಡಿದರು. ಈ ವೇಳೆ ತಾಪಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಜಯಪಾಲ್,ಗ್ರಾಪಂ ಪಿಡಿಒ ನಿರಂಜನ್, ಗ್ರಾಪಂ ಸದಸ್ಯರಾದ ವಿಮಲ,ಮಂಜುಳ,ನರಸಿಂಹಮೂರ್ತಿ, ಮಂಜುಳಶ್ರೀನಿವಾಸ್,ಪ್ರಕಾಶ್‌ರೆಡ್ಡಿ ಮುಖಂಡರಾದಮಂಜುನಾಥ್, ನರಸಿಂಹಮೂರ್ತಿ, ಗಂಗಾಧರ್,ಚಂದ್ರಶೇಖರ್, ನಿವೃತ್ತಶಿಕ್ಷಶ್ರೀಕಂಠಯ್ಯ, ಶ್ರೀನಿವಾಸರಾವ್,ವೆಂಕಟೇಶ್,ಸದಾಶಿವಯ್ಯ,ಶ್ಯಾಮರಾವ್,ಈಶ್ವರಯ್ಯ.ಮತ್ತಿತರರು ಇದ್ದರು.
Comments