ಬಾತ್ ರೂಂ ನಲ್ಲಿ ಜಾರಿಬಿದ್ದು ಮಾಜಿ ಪ್ರದಾನಿ ದೇವೇಗೌಡರಿಗೆ ಗಾಯ...!!!
ಜೆಡಿಎಸ್ ವರಿಷ್ಟ ,ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಶೌಚಕ್ಕೆ ಹೋಗಿದ್ದಾಗ ಬಾತ್ ರೂಂ ನಲ್ಲಿ ಜಾರಿ ಬಿದ್ದಿರುವ ಘಟನೆ ನಿನ್ನೆ ನಡೆದಿದೆ. ದೇವೇಗೌಡರು ಶುಕ್ರವಾರದ ರಾತ್ರಿಯಂದು ಬಾತ್ ರೂಂ ಗೆ ಹೋಗಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಜಾರಿ ಬಿದ್ದು, ಬಲಗಾಲಿಗೆ ಗಾಯವಾಗಿರುವ ಘಟನೆ ನಡೆದಿದೆ. ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ಘಟನೆ ನಡೆದಿದ್ದು, ದೇವೇಗೌಡರ ಬಲಗಾಲಿನ ಮೂಳೆ ಮುರಿದಿದೆ ಎಂದು ತಿಳಿದು ಬಂದಿದೆ. ಸದ್ಯ ಹೆಚ್ಡಿಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಕ್ಸ್ ರೇ ಬಳಿಕ ಕಾಲಿನ ಮೂಳೆ ಫ್ಯಾಕ್ಚರ್ ಆಗಿದ್ದು, ಸ್ವಲ್ಪ ದಿನಗಳ ಕಾಲ ಚಿಕಿತ್ಸೆ ಪಡೆದುಕೊಳ್ಳುವಂತೇ ವೈದ್ಯರು ಸೂಚಿಸಿದ್ದಾರೆ.ಮನೆಯಲ್ಲಿ ಬೇರೆಯವರ ಸಹಾಯದಿಂದ ಬಾತ್ ರೂಂ ಗೆ ಹೋಗುತ್ತಿದ್ದರು, ಅಚಾನಕ್ ಆಗಿ ಕಾಲು ಜಾರಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕುಟುಂಬದವರು, ರಾಜಕೀಯ ಸ್ನೇಹಿತರು ಈಗಾಗಲೇ ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದು, ದೇವೇಗೌಡರು ದಿನ ನಿತ್ಯ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಳಿ ವಯಸ್ಸಿನಲ್ಲಿ ಯೋಗ, ಧ್ಯಾನ ಮಾಡುತ್ತಾ ಮಾಜಿ ಪ್ರಧಾನಿ ಅವರು ಇತರರಿಗೂ ಮಾದರಿಯಾಗಿದ್ದಾರೆ. ಈ ವಯಸ್ಸಿನಲ್ಲೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
Comments