ಮನೆ ಮದ್ದು, ಸ್ವಸ್ಥ-ವೃತ್ತ, ಆಯುಷ್ ಅರಿವಿನ ಕಾರ್ಯಕ್ರಮ
ಐ.ಇ.ಸಿ. ಮತ್ತು ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ಆಯುಷ್ ಇಲಾಖೆ, ಜಿಲ್ಲಾ ಪಂಚಾಯತ್ ಬೆಂಗಳೂರು ನಗರ, ಇವರು ನಗರದ ಶ್ರೀ ಕೃಷ್ಣ ಶಿಕ್ಷಣ ಛಾರಿಟಬಲ್ ಟ್ರಸ್ಟ್ ಮತ್ತು ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘದ ಸಹಕಾರದೊಂದಿಗೆ ಶ್ರೀ ಕೃಷ್ಣ ಶಿಕ್ಷಣ ಛಾರಿಟಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ಇಂದು ಮಧ್ಯಾನ್ಹ ೧೨ ಘಂಟೆಗೆ ಆಯೋಜಿಸಲಾಗಿತ್ತು, ದೊಡ್ಡಬಳ್ಳಾಪುರ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಖುದ್ಸಿಯ ತಸ್ನೀಮ್, ಕೋಡಿಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಲಿತ ಡಿ. ಡಾ.ಮುರಳೀಕೃಷ್ಣ, ಹಣಬೆ, ಡಾ.ಮುಕ್ತಾಂಬಿಕ, ಬ್ಯಾತ, ಡಾ.ಲಕ್ಷ್ಮೀಚರಿತ, ಕೋಲಿಗೆರೆ, ಹಾಜರಿದ್ದು ಗಿಡಮೂಲಿಕೆಗಳಿಂದಾಗುವ ಪ್ರಯೋಜನಗಳನ್ನು ನೆರೆದಿದ್ದ ಮಹಿಳೆಯರಿಗೆ ವಿವರಿಸಿದರು.
ಡಾ. ಲಕ್ಷ್ಮಿಚರಿತ ಮಾತನಾಡಿ ನಮ್ಮ ದೈನಂದಿಕ ದಿನಚರಿಯಲ್ಲಿ ನಾವು ಬಳಸುವ ನೀರಿನ ಮಹತ್ವವನ್ನು ವಿವರಿಸಿ ನೀರನ್ನು ಅತಿಯಾಗಿ ಕುಡಿಯುವುದು ಅಥವಾ ಕುಡಿಯದೇ ಇರುವುದು ಎರಡೂ ಕೂಡ ತಪ್ಪು, ಒಮ್ಮೆ ಆಹಾರ ಸೇವಿಸಿದರೆ ಮತ್ತೆ ಮೂರು ಘಂಟೆಗಳ ಕಾಲ ಯಾವುದೇ ರೀತಿಯ ಪದಾರ್ಥಗಳನ್ನು ಸೇವಿಸಬಾರದು, ನಾವು ತಿಂದ ಆಹಾರ ಜೀರ್ಣವಾಗಲು ಸಮಯ ನೀಡಬೇಕು, ಮತ್ತೆ ಮತ್ತೆ ಆಹಾರ ಸೇವಿಸುತ್ತಿದ್ದರೆ ಅಜೀರ್ಣವಾಗಿ ಆರೋಗ್ಯ ಹಾಳಾಗುತ್ತದೆ ಎಂದರು. ಒಡೆದ ಕಾಲುಗಳಿಗೆ ಮನೆವೈದ್ಯ ಮಾಡಿಕೊಳ್ಳುವ ವಿಧಾನವನ್ನು ಸ್ಥಳದಲ್ಲಿ ಮಾಡಿ ತೋರಿಸಲಾಯಿತು. ಶ್ರೀ ಕೃಷ್ಣ ಶಿಕ್ಷಣ ಛಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷೆ ಶ್ರೀಮತಿ ಕವಿತ, ನಾಗರೀಕ ಹಿತರಕ್ಷಣಾ ವೇದಿಕೆಯ ಎಂ.ರಾಮು, ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘದ ಅಧ್ಯಕ್ಷೆ ಎಂ.ಕೆ.ವತ್ಸಲ, ಕಾರ್ಯದರ್ಶಿ ಗಿರಿಜ, ಬ್ರಾಹ್ಮಣ ಮಹಿಳಾ ಸಂಘದ ಅಧ್ಯಕ್ಷೆ ಶಾಂತ ಹಾಜರಿದ್ದರು.
Comments