ನಾನು ಅಧಿಕಾರಕ್ಕಾಗಿ ಆಸೆ ಪಡುವವನಲ್ಲ,ಅದನ್ನು ಎದೆ ಬಗೆದು ತೋರಿಸ್ಬೇಕಾ..!! ಕಾಂಗ್ರೆಸ್ ಗೆ ಗೌಡರ ಟಾಂಗ್..!!!
ಕುಮಾರಸ್ವಾಮಿಯವರ ವಿರುದ್ದ ವಿರೋಧ ಪಕ್ಷಗಳು ಸಾಕಷ್ಟು ಒತ್ತಡವನ್ನು ಏರಿದರೂ ಕೂಡ ಅದನ್ನೆಲ್ಲಾ ಸರಿದೂಗಿಸಿಕೊಂಡು ಸರ್ಕಾರವನ್ನು ಜಾಗೃತೆಯಿಂದ ಮುನ್ನೆಡುಸುತ್ತಿದ್ದಾರೆ.. ಇದೀಗ ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ನಮ್ಮ ಬಳಿ ಬಂದರು ಎಂದು ಹೆಚ್ ಡಿ ದೇವೇಗೌಡರು ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ದೇವೆಗೌಡರು ' ನಮ್ಮ ದೇಶದ ಮುಸ್ಮಿಮರು ತಾಜ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸಿಲ್ಲ, ಆದರೆ ಇನ್ನೂ ನಮ್ಮ ದೇಶದ ಮುಸ್ಲಿಮರನ್ನು ದೂಷಣೆ ಮಾಡಲಾಗುತ್ತಿದೆ, ನಾನು ಹಿಂದೂ ಧರ್ಮೀಯನಾದರೂ ಚರ್ಚ್, ದರ್ಗಾ ಎಲ್ಲಾ ಕಡೆ ಹೋಗುತ್ತೀನಿ ಎಂದು ತಿಳಿಸಿದರು ... ನಾನು ಹತ್ತು ತಿಂಗಳು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದೆ, ಅಧಿಕಾರ ಕಳೆದುಕೊಳ್ಳುವಾಗ ವಾಜಪೇಯಿ ಅವರು ಸರ್ಕಾರ ಉಳಿಸುತ್ತೇನೆ ಎಂದಿದ್ದರು. ಆದರೆ ಎಂದೂ ನಾನು ಅಧಿಕಾರಕ್ಕಾಗಿ ಆಸೆ ಪಡುವವನಲ್ಲ.ಅದನ್ನು ಎದೆ ಬಗೆದು ತೋರಿಸಬೇಕಾ,,ಎಂದು ದೇವೆಗೌಡರು ಪ್ರಶ್ನೆ ಮಾಡಿದರು.. ಪ್ರತಿ ಬಾರಿಯೂ ಕೂಡ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳು ಖೇಳಿ ಬರುತ್ತಿವೆ.. ಇದನ್ನೆಲ್ಲಾ ನಾವು ಒಪ್ಪುವುದಿಲ್ಲ ಎಂದು ಖಡಕ್ ಆಗಿಯೇ ಪರೋಕ್ಷವಾಗಿ ಕಾಂಗ್ರೆಸ್ ದೇವೆಗೌಡರು ಟಾಂಗ್ ಕೊಟ್ಟಿದ್ದಾರೆ..
Comments