`ಆಪರೇಷನ್ ಕಮಲ'ದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು..!!
ರಾಜಕೀಯ ವಲಯದಲ್ಲಿ ಇದೀಗ ಹೆಚ್ಚಾಗಿ ಕೇಳಿ ಬರುತ್ತಿರುವ ಶಬ್ದವೆಂದರೆ ಅದು ಆಪರೇಷನ್ ಕಮಲ…. ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ.. ಇದೀಗ ಬಿಜೆಪಿಯ ಆಪರೇಷನ್ ಕಮಲ ಕುರಿತಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಕೂಡ ಪ್ರತಿಕ್ರಿಯೆ ನೀಡಿದ್ದು, ಯಾರನ್ನೂ ಹಿಡಿದಿಟ್ಟುಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. ನಾನು ಆಪರೇಷನ್ ಕಮಲದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೇವೆಗೌಡರು, ಜೆಡಿಎಸ್ ನ ಎಲ್ಲಾ ಶಾಸಕರು ಕೂಡ ಜೊತೆಗೇ ಇದ್ದಾರೆ, ಯಾರೂ ಕೂಡ ಪಕ್ಷ ಬಿಟ್ಟು ಹೋಗಲ್ಲ.ನಾನು ಪ್ರಮಾಣಿಕವಾಗಿ ಆಪರೇಷನ್ ಕಮಲದ ಬಗ್ಗೆ ಯಾರ ಜೊತೆಯೂ ಮಾತಾಡಿಲ್ಲ. ಬಿಜೆಪಿಯವರೇ ಆಪರೇಷನ್ ಕಮಲ ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಮಾವೇಶ ಇದೆ. ಅದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದು, ನಮ್ಮ ಎಲ್ಲ ಶಾಸಕರ ಬಗ್ಗೆ ಯಾವುದೇ ಯೋಚನೆಯಿಲ್ಲ. ನಾಳೆಯ ಸಮಾವೇಶಕ್ಕೆ ಅಲ್ಪಸಂಖ್ಯಾತ ಸಮುದಾಯದವರನ್ನು ಕರೆತರುವಂತಹ ಜವಾಬ್ದಾರಿಯನ್ನು ಎಲ್ಲ ಶಾಸಕರಿಗೂ ಹಂಚಿದ್ದೇವೆ ಎಂದು ಹೆಚ್ ಡಿ ದೇವೆಗೌಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಆಪರೇಷನ್ ಕಮಲವನ್ನು ಠುಸ್ ಪಟಾಕಿಯಾಗೋದು ಗ್ಯಾರೆಂಟಿ ಎನ್ನುವಂತಾಗಿದೆ.
Comments