ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಪ್ರಧಾನಿ ಮೇಲೆ ಕಿಡಿಕಾರಿದ್ದೇಕೆ..!! ಇಲ್ಲಿದೆ ಅಸಲಿ ಕಾರಣ..?
ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲರ ಪಕ್ಷದವರು ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಆದರೆ ಇದರ ಮದ್ಯೆ ಜೆಡಿಎಸ್ ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಶುರುವಾಗಿದೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ..ಕುಮಾರಸ್ವಾಮಿಯವರ ಸರ್ಕಾರವನ್ನು ಕಂಡು ವಿರೋಧ ಪಕ್ಷದವರು ಹೊಟ್ಟೆಉರಿದುಕೊಳ್ಳುತ್ತಿದ್ದಾರೆ ಎಂಬುದು ಸಮ್ಮಿಶ್ರ ಸರ್ಕಾರದವರ ಮಾತಾಗಿದೆ.
ಜೆಡಿಎಸ್ ಕಾರ್ಯಕರ್ತರ ಸಭೆಗೂ ಮಾದಲೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಕ್ಲರ್ಕ್ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ನಾನು ಕ್ಲರ್ಕ್ ಎಂದು ಮೋದಿ ಅವರಿಗೆ ಹೇಳಿದ್ಯಾರು? ನಾನು ಹೇಳಿದ್ದೇನಾ? ಮೋದಿ ಅವರು ಗೌರವಯುತ ಸ್ಥಾನದಲ್ಲಿದ್ದು, ಹೀಗೆ ಮಾತನಾಡುವುದು ಸರಿಯಲ್ಲ. ಇದರಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದದು ಕಿಡಿಕಾರಿದರು.. ಲೋಕಸಭೆ ಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿದಂತಹ ಸಿಎಂ, ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ಕೂಡ ಕೇಳಬೇಕಾಗುತ್ತದೆ. ಆದರೆ ಸೀಟ್ ಹಂಚಿಕೆ ಕುರಿತು ಜೆಡಿಎಸ್ ಹಾಗೂ ಕಾಂಗ್ರೆಸ್ ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯದಲ್ಲಿಯೇ ಎರಡು ಪಕ್ಷದವರು ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿಯವರು ತಿಳಿಸಿದರು..
Comments