ಸಂಪುಟ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಗರಂ..! ಯಾರ ಮೇಲೆ ಗೊತ್ತಾ..?

ಇತ್ತಿಚಿಗೆ ವಿಧಾನ ಸೌಧದಲ್ಲಿ ಸಿಕ್ಕ ಹಣದ ಬಗ್ಗೆ ಸಾಕಷ್ಟು ಚರ್ಚೆಯಾಯಿತು.. ಇದೀಗ ವಿಧಾನಸೌಧದ ಆವರಣದಲ್ಲಿ ಸಚಿವ ಪುಟ್ಟರಂಗ ಶೆಟ್ಟಿಯ ಆಪ್ತರಾದ ಮೋಹನ್ ಬಳಿ 25.76 ಲಕ್ಷ ರು. ಪತ್ತೆಯಾದ ಪ್ರಕರಣವು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಸಚಿವರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಬ್ಬರೂ ಇಬ್ಬರು ಕೂಡ ಗರಂ ಆದ ದೃಶ್ಯವು ಕಂಡು ಬಂದಿದೆ.
ನೆನ್ನೆ ಸಂಜೆ ಅಂದರೆ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಗೆ ಪುಟ್ಟರಂಗ ಶೆಟ್ಟಿ ಸ್ವಲ್ಪ ಲೇಟಾಗಿ ಬಂದರು... ಎಲ್ಲ ಸಚಿವರು ವಿಧಾನಸೌಧಕ್ಕೆ ಪಶ್ಚಿಮ ದ್ವಾರದಿಂದ ಆಗಮಿಸಿದರೆ ಪುಟ್ಟರಂಗ ಶೆಟ್ಟಿ ಮಾತ್ರ ಮಾಧ್ಯಮ ಪ್ರತಿನಿಧಿಗಳ ಕಣ್ಣು ತಪ್ಪಿಸುವ ಸಲುವಾಗಿ ಪೂರ್ವ ದ್ವಾರದ ಮೂಲಕ ಸಚಿವ ಸಂಪುಟ ಸಭೆಯ ಕೊಠಡಿಗೆ ಬಂದರು.. ಆ ಸಂದರ್ಭದಲ್ಲಿ ಸಭೆಯಲ್ಲಿ ಸಚಿವರ ಆಪ್ತನ ಬಳಿ ಸಿಕ್ಕ ಹಣದ ಬಗ್ಗೆಯೂ ಕೂಡ ಪ್ರಸ್ತಾಪವಾಯಿತು. ಅಂತಹವ ರನ್ನು ಏಕೆ ಇಟ್ಟುಕೊಳ್ಳುತ್ತೀರಿ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸಚಿವರ ವಿರುದ್ಧ ಸಿಡಿಮಿಡಿಗೊಂಡರು ಎಂದು ಮೂಲಗಳು ತಿಳಿಸಿವೆ.
Comments