ನಾಳೆ ಜೆಡಿಎಸ್ ಶಾಸಕಾಂಗ ಸಭೆ..! ಉಳಿಸಿಕೊಂಡಿರುವ ಸ್ಥಾನಗಳ ನೇಮಕ ಯಾವಾಗ..?
ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಪಕ್ಷವಾದ ಜೆಡಿಎಸ್ ತನ್ನ ಪಾಲಿನ ನಿಗಮ ಮಂಡಳಿಗೆ ನೇಮಕಾತಿಗೆ ಸಂಬಂಧ ಪಟ್ಟಂತೆ ಜೆಡಿಎಸ್ ನಾಳೆ ಶಾಸಕರೊಂದಿಗೆ ಚರ್ಚೆ ನಡೆಸಲು ಮುಂದಾಗಿದೆ ಎನ್ನಲಾಗುತ್ತಿದೆ.. ಈಗಾಗಲೇ ಕಾಂಗ್ರೆಸ್ ತನ್ನ ಸಚಿವ ಸ್ಥಾನವನ್ನು ಭರ್ತಿ ಮಾಡಿ, ನಿಗಮ ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಕೂಡ ನೇಮಕಾತಿ ಮಾಡಿದೆ. ಆದರೆ, ಜೆಡಿಎಸ್ ಮಾತ್ರ ತನ್ನ ಸ್ಥಾನಗಳನ್ನು ಹಾಗೇ ಉಳಿಸಿಕೊಂಡಿದೆ..
ಈ ವಿಷಯದ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಲು ನಾಳೆ ಜೆಡಿಎಸ್ ಸಭೆ ನಡೆಸಲು ಮುಂದಾಗಿದೆ ಎನ್ನಲಾಗುತ್ತಿದೆ... ಸಂಕ್ರಾತಿ ಹಬ್ಬದಂದು ಈ ನೇಮಕಾತಿಯನ್ನು ಒಂದೇ ಹಂತದಲ್ಲಿ ನಡೆಸಲಾಗುವುದು ಎಂದು ತಮ್ಮ ಶಾಸಕರಿಗೆ ಕುಮಾರಸ್ವಾಮಿ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಹಾಗೂ ಸಂಸದೀಯ ಕಾರ್ಯದರ್ಶಿ ಹಾಗೂ ನಿಗಮ ಮಂಡಳಿ ನೇಮಕ ಕುರಿತು ಕೂಡ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲು ಜೆಡಿಎಸ್ ತನ್ನ ಸ್ಥಾನಗಳನ್ನು ಭರ್ತಿ ಮಾಡುಲು ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರೆ.
Comments