ಮಂಡ್ಯ ಲೋಕಸಭಾ ಚುನಾವಣೆಗೆ ತಾತ-ಮೊಮ್ಮಗನ ನಡುವೆ ನಡೆಯುತ್ತಾ ಪೈಪೋಟಿ..!! ರೇಸ್’ನಲ್ಲಿ ಮುಂಚೂಣಿಯಲ್ಲಿರೋದು ದೇವೆಗೌಡ್ರ ..!! ನಿಖಿಲ್ ಕುಮಾರಸ್ವಾಮಿನಾ...!!

ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದ 2019ರ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಖಚಿತ ಎನ್ನುವ ಚರ್ಚೆ ಮಧ್ಯೆ ಈಗ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.. ಅಷ್ಟೆ ಅಲ್ಲದೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ವಿಚಾರವಾಗಿ ವಿವಿಧ ನಾಯಕರು ಹೇಳಿಕೆಗಳನ್ನು ಕೊಟ್ಟಿದ್ದಾರೆ..
ಜೆಡಿಎಸ್’ಗೆ ಭದ್ರಕೋಟೆಯಾದಂತಹ ಮಂಡ್ಯದಲ್ಲಿ ನಿಖಿಲ್ ಅವರನ್ನು ಕಣಕ್ಕಿಳಿಸಿದರೆ ಗೆಲುವು ನಿಶ್ಚಿತ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ..ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಕಣಕ್ಕಿಳಿಸಲು ದೇವೇಗೌಡರ ಕುಟುಂಬ ಈಗಾಗಲೇ ತಯಾರಿ ನಡೆಸುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.. ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡುವ ದೇವೇಗೌಡರು ಮಂಡ್ಯದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯು ಕೂಡ ಹೆಚ್ಚಾಗಿ ಕೇಳಿ ಬರುತ್ತಿದೆ.. ಒಟ್ಟಾರೆ ಮೊಮ್ಮಕ್ಕಳ ಭವಿಷ್ಯವನ್ನು ರಾಜಕೀಯದಲ್ಲಿ ರೂಪಿಸುವಲ್ಲಿ ದೇವೆಗೌಡರು ಪಣ ತೊಟ್ಟಿರುವುದಂತೂ ಸುಳ್ಳಲ್ಲ..
Comments