ಕಾಂಗ್ರೆಸ್’ಗೆ ನುಂಗಲಾರದ ತುತ್ತಾದ ಸಿಎಂ ಕುಮಾರಸ್ವಾಮಿಯವರ ಈ ನಡೆ..!!
ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಗೊಳಗೆ ಅಸಮಾಧಾನ ಹೊರಹೊಮ್ಮುತ್ತಿದೆ. ಇದೇ ನಿಟ್ಟಿನಲ್ಲಿ ಮಿತ್ರ ಪಕ್ಷ ಕಾಂಗ್ರೆಸ್ ಶಾಸಕರ ಎಚ್ಚರಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿವಿಧ ನಿಗಮ ಮಂಡಳಿಗಳ ನೇಮಕ ಕುರಿತಂತೆ ಕಡತಕ್ಕೆ ಸಹಿ ಹಾಕಿ ಆದೇಶವನ್ನು ನೀಡಿದ್ದಾರೆ. ಆದರೆ ತಮ್ಮ ಜೆಡಿಎಸ್ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿದ್ದ 9 ನೇಮಕಗಳಿಗೆ ತಡೆ ಒಡ್ಡುವ ಮೂಲಕ ಸ್ಪಷ್ಟ ಸಂದೇಶವನ್ನೂ ನೀಡಿದ್ದಾರೆ..
ಮುಖ್ಯಮಂತ್ರಿಗಳ ಈ ನಡೆ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿ ಬದಲಾಗುತ್ತಿದೆ.. ಮೈತ್ರಿ ಪಕ್ಷಗಳ ನಡುವೆ ಮತ್ತಷ್ಟು ಭಿನ್ನಾಭಿಪ್ರಾಯ ಬರುವ ಸಾಧ್ಯತೆಯು ಕಂಡು ಬರುತ್ತಿದೆ. ಸುಮಾರು 2 ವಾರಗಳ ಹಿಂದೆಯೇ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ದೆಹಲಿಗೆ ತೆರಳಿ ತಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅನುಮತಿಯೊಂದಿಗೆ ಪಟ್ಟಿ ಸಿದ್ಧಪಡಿಸಿಕೊಂಡು ತಲುಪಿಸಿದ್ದರೂ ಕುಮಾರಸ್ವಾಮಿ ಅವರು ಮಾತ್ರ ನೇಮಕ ಮಾಡಲಾಗುತ್ತಿದೆ.ಈ ಬಗ್ಗೆ ಕಾಂಗ್ರೆಸ್ ಪಕ್ಷದವರಲ್ಲಿ ಅಸಮಾಧಾನ ಮೂಡುತ್ತಿದೆ ಎನ್ನಲಾಗುತ್ತಿದೆ.
Comments